ಗುರುಚೇತನ(TPD)

           ಗುರುಚೇತನ        ಕಾರ್ಯಕ್ರಮದಡಿಯಲ್ಲಿ ರೂಪಿತವಾದ ವಿಜ್ಞಾನ      ಮಾಡ್ಯೂಲ್ ಗಳು 

(ಈ ಮಾಡ್ಯೂಲ್ ಗಳು ವಿಜ್ಞಾನ ಶಿಕ್ಷಕರಿಗೆ ಅತಿ ಉಪಯುಕ್ತವಾಗಿದ್ದು, ತರಬೇತಿ  ಪರಿಕಲ್ಪನೆಯ ಕೆಳಭಾಗದಲ್ಲಿ 5 ಮಾಡ್ಯೂಲ್ ಗಳನ್ನು ಡೌನ್ ಲೋಡ್ ಮಾಡಲು ಲಿಂಕ್ ನೀಡಲಾಗಿದೆ.

ಗುರುಚೇತನ ತರಬೇತಿಯ ಆಶಯ/ ಉದ್ದೇಶ


ಕಾರ್ಯಕ್ರಮದ ಪರಿಕಲ್ಪನೆ Programme Overview

ಗುರುಚೇತನ
GURUCHETHANA

“ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ, ಶಿಕ್ಷಕರ ಶಕ್ತಿ ಹಾಗೂ ಮಹತ್ವವನ್ನು ಸಾರಿ ಹೇಳುತ್ತದೆ. ಸಮಾಜದ ನಿರೀಕ್ಷೆಗಳನ್ನು ಈಡೇರಿಸುವ ಶಿಕ್ಷಕರ ಕಾರ್ಯದಕ್ಷತೆಯ ಮೇಲೆ ಶಿಕ್ಷಣ ಇಲಾಖೆ ಅತೀವ ನಂಬಿಕೆಯನ್ನಿರಿಸಿದೆ. ಶಿಕ್ಷಕರಲ್ಲದೆ ಇನ್ನಾರಿಗೂ ಸದೃಢ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ಸಾಧ್ಯವಾಗದು. ಶಿಕ್ಷಕರು ಕೇವಲ ಅಕ್ಷರ ಕಲಿಸುವವರಲ್ಲ, ಬದಲಾಗಿ ಈ ದೇಶದ ಭವಿಷ್ಯಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ರೂಪಿಸುವವರು. ಇಲಾಖೆಯ ಹಾಗೂ ಭಾಗಿದಾರ ಪೋಷಕರ ನಡುವೆ ಜ್ಞಾನ ಸೇತುವೆಯಾಗಿ ಅಸಾಧಾರಣ ಸಂದರ್ಭಗಳಲ್ಲಿಯೂ ವ್ಯಕ್ತಿಯಾಗಿ ಕಾರ್ಯನಿರ್ವಹಿಸುವರು. ಅಂತಹ ಸಮರ್ಥ ಶಿಕ್ಷಕರ ಪಡೆಯನ್ನು ಹೊಂದುವುದೇ ನಮ್ಮ ರಾಜ್ಯದ ಕನಸು. ಶಿಕ್ಷಕರು ವ್ಯಕ್ತಿ-ಶಕ್ತಿಯಾಗಿ ರೂಪುಗೊಳ್ಳುತ್ತ ಶಿಕ್ಷಣದ ಬೆನ್ನೆಲುಬಾಗಿ ಸಮಗ್ರ ಗುರಿಯ ಕಡೆಗೆ ಹೆಜ್ಜೆಯಿರಿಸಬೇಕೆಂಬುದೇ ಶಿಕ್ಷಣ ಇಲಾಖೆಯ ಆಶಯ.

ಶಿಕ್ಷಕರ ಅಭಿವೃದ್ಧಿ ಪ್ರಯತ್ನಗಳು ಬಹಳ ಹಿಂದಿನಿಂದ ನಡೆದಿದೆ. ಆದರೆ ಶಿಕ್ಷಕರ ಮೇಲಿನ ನಿರೀಕ್ಷೆಗಳು ಇನ್ನೂ ಹೆಚ್ಚಾಗಿದೆ, ಜೊತೆಗೆ ಭಿನ್ನವಾಗಿದೆ. ಇವುಗಳನ್ನು ವಾರ್ಷಿಕ ಯೋಜನೆಗಳು, ವಿಷಯಕ್ಕೆ ಸೀಮಿತವಾದ ತರಬೇತಿಗಳಿಂದ ಪೂರೈಸಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಮನಗಂಡಿದೆ. ಶಿಕ್ಷಕರ ಸಂಪನ್ಮೂಲಗಳನ್ನು, ವೃತ್ತಿ ಸಾಮರ್ಥ್ಯಗಳನ್ನು ಅಭಿವೃದ್ಧಿ ಗೊಳಿಸಬೇಕು ಎನ್ನುವ ಆಶಯದೊಂದಿಗೆ ಹೊಸ ನೆಲೆಯ ಚಿಂತನೆಗಳನ್ನು ಯೋಜಿಸಲಾಗಿದೆ. ಇದಕ್ಕಾಗಿ “ಗುರುಚೇತನ” ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಜಾರಿಗೊಳಿಸುತ್ತಿದೆ. ಶಿಕ್ಷಕರನ್ನು ಅಭಿವೃದ್ಧಿ ಗೊಳಿಸಲು ದೀರ್ಘಾವಧಿಯ ಯೋಜನೆಯ ಅಗತ್ಯವಿದ್ದು, ಇದಕ್ಕಾಗಿ ವಿಶೇಷವಾದ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಪಠ್ಯಕ್ರಮವನ್ನು ರೂಪಿಸಲಾಗಿದೆ.ಈ ನವೀನ ಯೋಜನೆಯಲ್ಲಿ ಶಿಕ್ಷಕರು ಸ್ವಾಯತ್ತವಾಗಿ ತಮ್ಮ ವೃತ್ತಿಪರ ಅಭಿವೃದ್ಧಿ ಗೆ ಮಾಡ್ಯೂಲ್‌ಗಳನ್ನು ತಾವೇ ಆಯ್ಕೆಮಾಡಿಕೊಂಡು ತೊಡಗಿಕೊಳ್ಳುವ ಸುವರ್ಣಾವಕಾಶ ಒದಗಿಸಿದೆ. ಇವುಗಳು ತರಗತಿ ಪ್ರಕ್ರಿಯೆಯನ್ನು ರೂಪಿಸುವುದಕ್ಕೆ ನೆರವಾಗುವ ಶಿಕ್ಷಣದ ತಾತ್ವಿಕತೆ, ವಿಷಯದ ಸ್ವರೂಪ, ವಿವಿಧ ಬೋಧನಾ ಕಲಿಕಾ ವಿಧಾನ ಮತ್ತು ವಿಷಯಗಳ ಸಮ್ಮಿಲನ, ಕಲಿಕೆಯನ್ನು ಅನುಭವಾತ್ಮಕವಾಗಿ ಮತ್ತು ಮಗುವಿನ ಸಂದರ್ಭಕ್ಕೆ ಪೂರಕವಾಗಿ ಅನುಕೂಲಿಸುವ ಶೈಕ್ಷಣಿಕ ದೃಷ್ಟಿಕೋನಗಳನ್ನು ಒಳಗೊಂಡಿರುತ್ತವೆ. ಗುರುಚೇತನ ಕಾರ್ಯಕ್ರಮದಲ್ಲಿ ಕನ್ನಡ,ಹಿಂದಿ, ವಿಜ್ಞಾನ, ಗಣಿತ,ಸಮಾಜ ವಿಜ್ಞಾನ, ನಲಿ ಕಲಿ,ಶೈಕ್ಷಣಿಕ ದೃಷ್ಟಿಕೋನ ವಿಷಯದಲ್ಲಿ ಮಾಡ್ಯೂಲ್‌ಗಳು ಸಿದ್ಧಗೊಂಡಿವೆ.

ಉದ್ದೇಶಗಳು

  1. ಶಿಕ್ಷಕರನ್ನು ಚಿಂತನಶೀಲ ಅಭ್ಯಾಸಿಗರನ್ನಾಗಿ (Reflective Practitioner) ಮಾಡುವುದು
  2. ಶಿಕ್ಷಕರು ಸ್ವ ಪ್ರೇರಣೆಯಿಂದ ವೃತ್ತಿಪರ ಅಭಿವೃದ್ಧಿ ಯಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು ಕಲ್ಪಿಸುವುದು
  3. ಮಕ್ಕಳ ಕಲಿಕೆಯ ಅವಕಾಶಗಳನ್ನು ಅರ್ಥೈಸಲು ಮತ್ತು ಅನುಕೂಲಿಸಲು ಸ್ವಾಯತ್ತ ಶಿಕ್ಷಕರನ್ನು ರೂಪಿಸುವುದು

ಕಾರ್ಯಕ್ರಮದ ವಿಶೇಷತೆಗಳು

  • ಪ್ರಥಮ ಬಾರಿಗೆ ಶಿಕ್ಷಕರ ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಎನ್ನಬಹುದಾದ ಶಿಕ್ಷಕರ ಆಯ್ಕೆ ಆಧಾರಿತ ಅಭಿವೃದ್ಧಿ ಗೆ ಅವಕಾಶ. ಶಿಕ್ಷಕರು ತಮ್ಮ ವೃತ್ತಿ ಬೆಳವಣಿಗೆಯ ಅಗತ್ಯ ಹಾಗೂ ಆಸಕ್ತಿಗೆ ತಕ್ಕ ಮಾಡ್ಯೂಲ್‍ಗಳನ್ನು ಆಯ್ಕೆ ಮಾಡಿಕೊಂಡು ಭಾಗವಹಿಸುವ ಅವಕಾಶವಿದೆ.
  • ದೀರ್ಘಕಾಲದಲ್ಲಿ ಶಿಕ್ಷಕರ ಅಭಿವೃದ್ಧಿ ಯನ್ನು ಯೋಜಿಸಲು ನೆರವಾಗಲು “ಶಿಕ್ಷಕರ ಅಭಿವೃದ್ಧಿ ಪಠ್ಯಕ್ರಮ”ವನ್ನು ಇಲಾಖೆ ರೂಪಿಸಿದೆ, ಅದರಲ್ಲಿ ಶಿಕ್ಷಕರ ಅಭಿವೃದ್ಧಿ ಗೆ ಮುಂದಿನ 5 ವರ್ಷಗಳಿಗೆ ಅಗತ್ಯವಾದ ಥೀಮ್‍ಗಳನ್ನು ಗುರುತಿಸಿದೆ.
  • ಕನ್ನಡ ಮಾಧ್ಯಮದಲ್ಲಿ 42 ಮಾಡ್ಯೂಲ್‌ಗಳು, ಉರ್ದು ಮಾಧ್ಯಮದಲ್ಲಿ 24 ಮಾಡ್ಯೂಲ್‌ಗಳು ಹಾಗೂ ಮರಾಠಿ ಮಾಧ್ಯಮದಲ್ಲಿ 20 ಮಾಡ್ಯೂಲ್‌ಗಳನ್ನು ರಚಿಸಲಾಗಿದೆ.
  • ಶಿಕ್ಷಕರು ಮಾಡ್ಯೂಲ್ ಆಯ್ಕೆ ಸಂದರ್ಭದಲ್ಲಿ ಅವರು ಬೋಧಿಸುವ ವಿಷಯಕ್ಕೆ ಸೀಮಿತವಾಗದೆ, ಅವರ ಆಸಕ್ತಿ ಹಾಗೂ ಅಗತ್ಯತೆ ಇರುವ ಯಾವುದೇ ಮಾಡ್ಯೂಲ್‍ಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿದೆ.
  • ಶಿಕ್ಷಕರ ಮಾಡ್ಯೂಲ್‌ಗಳಿಗೆ ನೀಡಿದ ಆದ್ಯತೆಗಳಿಗೆ ಅನುಸಾರವಾಗಿ ಕಾರ್ಯಾಗಾರಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದೆ.
  • ವಿಷಯ ಪರಿಕರ, ಸಂಶೋಧನೆ ಮತ್ತು ವಿವಿಧ ಜ್ಞಾನಕ್ಷೇತ್ರಗಳ ಸಮಗ್ರತೆಯ ಆಶಯ ಹೊಂದಿದ ಮಾಡ್ಯೂಲ್‍ಗಳನ್ನು ಕಾರ್ಯಾಗಾರದ ಪೂರ್ವದಲ್ಲೇ ಅಧ್ಯಯನ ಮಾಡಲು ವೆಬ್‍ಸೈಟ್‍ನಲ್ಲಿ ಅಳವಡಿಸಲಾಗಿದೆ.
  • ಕಾರ್ಯಾಗಾರಗಳು ವಿಕೇಂದ್ರಿಕೃತ, ಸಹವರ್ತಿ, ಸುಸ್ಥಿರ ಸ್ವಕಲಿಕೆಯ ಅವಕಾಶವನ್ನು ಶಿಕ್ಷಕರಿಗೆ ಒದಗಿಸುತ್ತವೆ.
  • ಶಿಕ್ಷಕರು ತಂಡವಾಗಿ ನಿರಂತರ ಕಲಿಕೆಯ ಸಂಸ್ಕೃತಿಯನ್ನು ಹುಟ್ಟುಹಾಕುವ ಮೂಲಕ ಸಮರ್ಥ ಶಿಕ್ಷಕರನ್ನು ಅಭಿವೃದ್ಧಿ ಗೊಳಿಸುವ ಆಶಯ ಹೊಂದಿದೆ.
  • ಟಿ.ಟಿ.ಎಂ.ಎಸ್.(TTMS-Teacher Training Management System) ಪ್ರತ್ಯೇಕ ಪೋರ್ಟಲ್‌ನ್ನು ರಚಿಸಲಾಗಿದ್ದು ಇದರಲ್ಲಿ ಶಿಕ್ಷಕರು 6 ಮಾಡ್ಯೂಲ್‌ಗಳ ಆಯ್ಕೆಗಳನ್ನು ನಮೂದಿಸಬಹುದಾಗಿದೆ.
  • ಶಿಕ್ಷಕರ ಮಾಡ್ಯೂಲ್ ಆಯ್ಕೆ ನಂತರ ಬ್ಯಾಚ್ ರಚನೆಯಾದ ಮೇಲೆ ಕಾರ್ಯಾಗಾರ ನಡೆಯುವ ದಿನಾಂಕ ಮತ್ತು ಸ್ಥಳದ ಬಗ್ಗೆ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಸಂದೇಶ ರವಾನೆಯಾಗುತ್ತದೆ.



  • ಮಾಡ್ಯೂಲ್ -17 .ಧಾತು-ಕಣ- ದೀಪ್ತಿ

    “ಧಾತು-ಕಣದೀಪ್ತಿ” - ರಾಸಾಯನಿಕ ಬಂಧಗಳು

    ರಸಾಯನ ಶಾಸ್ತ್ರದಲ್ಲಿನ ಅನೇಕ ವಿಷಯಗಳು ಎಷ್ಟು ತಿಳಿದರೂ, ಓದಿದರೂ, ತರಬೇತಿ ಪಡೆದರೂ ಸಹ ಒಂದು ರೀತಿ ಅಮೂರ್ತ ಕಲಿಕೆಯ ಭಾವನೆ ಮೂಡುವುದು ಸಹಜ. ಈ ಮಾಡ್ಯೂಲ್ನಷಲ್ಲಿ ಪ್ರಪಂಚದಲ್ಲಿನ ಎಲ್ಲ ವಸ್ತುಗಳು ಸ್ಥಿರತೆಯನ್ನು ಹೇಗೇ ಕಾಪಾಡಿಕೊಳ್ಳುತ್ತವೆ? ಧಾತುಗಳು ಯಾವುದರಿಂದ ಮಾಡಲ್ಪಟ್ಟಿದೆ? ಎಲ್ಲಾ ಧಾತುಗಳು ವಿವಿಧ ಲಕ್ಷಣಗಳನ್ನು ತೋರುವುದು ಏಕೆ? ಬಿಡಿ ಬಿಡಿಯಾದ ಮೂಲ ಧಾತುಗಳು ಒಂದರೊಡನೊಂದು ಸೇರಿದಾಗ, ಅದರ ಮೂಲ ಲಕ್ಷಣಗಳಲ್ಲಿ ಕಂಡು ಬರುವ ವಿಸ್ಮಯದ ಬದಲಾವಣೆಗಳಿಗೆ ಕಾರಣಗಳೇನು? ಎನ್ನುವುದನ್ನು ಈ ಮಾಡ್ಯೂಲ್ನ‍ಲ್ಲಿ ಪರಿಚಯಿಸಿಕೊಳ್ಳಬಹುದು. ವಿಶ್ವದಲ್ಲಿ ವಿಜ್ಞಾನದ ಕೌತುಕಗಳನ್ನು ಸರಳೀಕರಿಸಲು ಸಾಕಷ್ಟು ಪ್ರಯತ್ನಗಳಾಗುತ್ತಿದ್ದರೂ, ಇನ್ನೂ ಇದುವರೆಗೆ ಬಿಡಿಸಲಾಗದ, ಉತ್ತರ ಸಿಗದ ಅನೇಕ ಸಂಕೀರ್ಣ ವಿಷಯಗಳು ಅನಾವರಣಕ್ಕೆ ಕಾದಿವೆ. ಈ ಅನ್ವೇಷಣೆಗೆ ಶಿಕ್ಷಕ ಮತ್ತು ಮಕ್ಕಳನ್ನು ಉತ್ತೇಜಿಸಲು ಬೇಕಾದ ಸಾಕಷ್ಟು ಅವಕಾಶಗಳನ್ನುಸೃಷ್ಟಿಮಾಡಲಾಗಿದೆ-

    *********"".   *****"""". ******"""*    ********  ********

    ಮಾಡ್ಯೂಲ್-14- ಜೀವ ಪರಿಸರ ಶಾಸ್ತ್ರ (ಪರಿಸರ ಪ್ರಜ್ಞೆ)

    "CLICK HERE TO DOWNLOAD ' ECOLOGY' MODULE -14




    ಕಾಮೆಂಟ್‌ಗಳಿಲ್ಲ:

    Newtons first law experiment