"ದಿ ಟ್ರುತ್" ಇದು ಜ್ಞಾನ-ವಿಜ್ಞಾನ ವಿಷಯಗಳನ್ನು ,ಅದಕ್ಕೆ ಪೂರಕವಾದ ಸಂಪನ್ಮೂಲಗಳನ್ನು ಶಿಕ್ಷಕರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಒಂದೆಡೆ ದೊರಕುವಂತೆ ಮಾಡಲು ರೂಪಿತವಾದ ಬ್ಲಾಗ್
ಇದು ಕೇವಲ ಪ್ರಾರಂಭಿಕ ಹಂತವಾಗಿದ್ದು, ದಿನಕಳೆದಂತೆ ಇದರಲ್ಲಿ ಹಲವು ವಿಚಾರಗಳನ್ನು ಹಲವು ಮಾರ್ಗದರ್ಶಿಗಳಿಂದ ಸೇರಿಸುವ ಉದ್ದೇಶವಿದೆ.
ವಿಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದ್ದು , ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಈ ಸಣ್ಣ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರ ಕೋರುತ್ತೇನೆ.
ಈಗಾಗಲೆ ಹಲವು ಬ್ಲಾಗ್ ರಚನೆಯ ಅನುಭವ ಇರುವ ನನಗೆ, ನನ್ನ ಕಾರ್ಯಕ್ಕೆ ಸದಾ ಬೆಂಬಲವಾಗಿ ನಿಲ್ಲುವ ಅಣ್ಣಂದಿರಾದ ಶ್ರೀ ಕೊಟ್ರೇಶ, ಗುರುಬಸವರಾಜ ಮತ್ತು ಮುರುಘರಾಜರವರಿಗೂ, ಹಾಗೂ ಮಡದಿ ಶ್ರೀಮತಿ ಭವ್ಯಶ್ರೀ ಅವರಿಗೆ ಮತ್ತು ನನ್ನ ಸ್ಪೂರ್ತಿಯ ಸ್ನೇಹಸದನದ ಎಲ್ಲಾ ಹಿರಿಯರಿಗೆ ಮತ್ತು ನಮ್ಮ ಶಾಲೆಯ ಮುಖ್ಯಗುರುಗಳಾದ ಶ್ರೀ ತಿಪ್ಪೇಸ್ವಾಮಿಯವರಿಗೂ ಹಾಗೂ ಎಲ್ಲಾ ಸಹಶಿಕ್ಷಕರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
---- ಅಮರೇಶ ಸೊನ್ನದ
ಕಾಮೆಂಟ್‌ಗಳಿಲ್ಲ: