ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 10 ನೇ ದಿನ
ಭಾರತದ ಮಹಾನ್ ವಿಜ್ಞಾನಿಗಳು
1. ಚಂದ್ರಶೇಖರ ವೆಂಕಟರಾಮನ್
ಇವರು 1888ರ 7 ರಂದು ಕಾವೇರಿ ದಂಡೆಯ ಮೇಲಿರುವ ತಿರುಚನಾಪಳ್ಳಿ ಜಿಲ್ಲೆಯ ಒಂದು ಚಿಕ್ಕ ಗ್ರಾಮದಲ್ಲಿ ಜನಿಸಿದರು. ಜನ್ಮನಾಮ ವೆಂಕಟರಾಮನ್. ಮುಂದೆ ಆ ಹೆಸರು ಕೇವಲ ರಾಮನ್ ಎಂದೇ ಉಳಿಯಿತು. ನಂತರ ಬ್ರಿಟಿಷ್ ಸರಕಾರ ಸರ್ ಪ್ರಶಸ್ತಿ ಕೊಟ್ಟ ಮೇಲೆ ಸರ್ ಸಿ.ವಿ. ರಾಮನ್
ಬಾಲ್ಯದ ಶಿಕ್ಷಣ ವಿಶಾಖಪಟ್ಟಣದಲ್ಲಿ , ನಂತರ ಮದ್ರಾಸಿಗೆ (ಈಗಿನ ಚನ್ನೈ) ಬಂದು ಪ್ರೆಸಿಡೆನ್ಸಿ ಕಾಲೇಜ್ ಸೇರಿದರು. ಹದಿನಾರನೇ ವಯಸ್ಸಿನಲ್ಲಿ ಬಿ.ಎ. ಮೊದಲ ತರಗತಿಯಲ್ಲಿ ಬಂಗಾರದ ಪದಕದೊಂದಿಗೆ ಪಾಸಾದರು. ಎಂ.ಎ. ಪದವಿ ಪಡೆದರು. ಮುಂದೆ ಭಾರತ ಸರಕಾರ ನಡೆಸುತ್ತಿದ್ದ ಫೈನಾನ್ಸಿಯಲ್ ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ತಮ್ಮ 19ನೇ ವಯಸ್ಸಿನಲ್ಲಿ ಉತ್ತೀರ್ಣರಾದರು.
ತಮ್ಮ ಸ್ನೇಹಿತ ರಾಮಸ್ವಾಮಿಯನ್ ಎಂಬವರ ಸೋದರಿ ಲೋಕಸುಂದರಿಯೊಂದಿಗೆ ರಾಮನ್‌ರು ವಿವಾಹವಾದರು. 1917ರಲ್ಲಿ ಕಲಕತ್ತೆ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರೊಫೆಸರ್‌ರಾದರು. 1924ರಲ್ಲಿ ರಾಯಲ್ ಸೊಸಾಯಿಟಿಯು ರಾಮನ್‌ರನ್ನು ತನ್ನ ಸದಸ್ಯರನ್ನಾಗಿ
ಮಾಡಿಕೊಂಡಿತು. ಕ್ಯಾಲಿಫೋರ್ನಿಯಾ ನಗರದ ಟೆಕ್ನಲಾಜಿ
ರಾಮನ್‌ರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಂಡಿತು.
ಯಾವುದೇ ಪಾರದರ್ಶಕ ವಸ್ತುಗಳ ಮೇಲೆ ಪ್ರಖರವಾದ ಬೆಳಕಿನ ಕಿರಣವನ್ನು ಹಾಯಿಸಿದಾಗ ಹರಿಯುತ್ತಿರುವ ವಸ್ತುವಿನ ಒಳ ಅಣುರಚನೆಯನ್ನು ವಿಕಿರಣಗೊಂಡು ವರ್ಣಪಟಲದ ಮೇಲೆ ಕೆಲವು ಹೊರರೇಖೆಗಳನ್ನು ಗುರುತಿಸುತ್ತದೆ. ಅವುಗಳ ಬಲದಿಂದ ಹಲವು ತರದ ವಸ್ತುಗಳ ನಿಜ ಸ್ವರೂಪವನ್ನು ಸುಲಭ ರೀತಿಯಲ್ಲಿ ಗೊತ್ತುಪಡಿಸುವುದು ಸಾಧ್ಯವಾಗುತ್ತದೆ. ಆಧುನಿಕ ಭೌತವಿಜ್ಞಾನದ ಜನಕರೆಂದು ಪ್ರಖ್ಯಾತರಾದ ಐನ್‌ಸ್ಟೈನ್‌ರು ತನ್ನ ಸಿದ್ಧಾಂತದ ಮೇಲೆ ರಾಮನ್ ಅವರ ಸಂಶೋಧನೆಯು ಹೆಚ್ಚಿನ ಪರಿಣಾಮ ಬೀರಿದೆ ಎಂದು ಸ್ಮರಿಸಿರುವರು. ಇಟಲಿಯ ವಿಜ್ಞಾನ ಸಂಸ್ಥೆಯು ಬಂಗಾರದ ಪದಕವನ್ನು ರಾಮನ್‌ರಿಗೆ1930ರಲ್ಲಿ ಕೊಟ್ಟು ಗೌರವಿಸಿತು.
ಬ್ರಿಟಿಷ್ ಸರಕಾರ 'ಸರ್' ಪದವಿ ಪ್ರದಾನ ಮಾಡಿತು. ಫ್ರೀಬರ್ಗನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿತು. ಸ್ವಿಟ್ಟರಲೆಂಡಿನ ಫಿಜಿಕಲ್ ಸೊಸೈಟಿಯು ಗೌರವ ಸದಸ್ಯನನ್ನಾಗಿ ಚುನಾಯಿಸಿತು. 1930ರಲ್ಲಿ ಇವರಿಗೆ ನೋಬೆಲ್ ಪರಿಶೋಷಕ ದೊರೆಯಿತು.
ರಾಮನ್ ಗುರುತಿಸಿದ ಬೆಳಕಿನ ಪ್ರತಿಫಲನದ ಲಕ್ಷಣಗಳ ಆಧಾರದ ಮೇಲೆ ಪ್ರಸಿದ್ಧ ಪ್ರಯೋಗಾಲಯಗಳಲ್ಲಿ ಸಂಶೋಧನೆ ಈಗಲೂ ಮುಂದುವರಿಯುತ್ತಿದೆ. ಆಗ ಈ ವಿಷಯವಾಗಿ ಸುಮಾರು 47,000 ಲೇಖನಗಳು ಪ್ರಕಟವಾಗಿದ್ದವು.ಕಲಕತ್ತೆಯಲ್ಲಿ ರಾಮನ್ ರ ಪ್ರಸಿದ್ದಿಯನ್ನು ಅಲ್ಲಿಯ ಬಂಗಾಳಿಗಳು ಸಹಿಸದಾದರು. ''ಹಳೆಯ ಕಂದಾಚಾರದ ಗೊತ್ತು ವಿಜ್ಞಾನಿ'' ಎಂದು ಮೇಘನಾದ ನಂಥವರೂ ಪ್ರಚಾರ ನಡೆಸಿದರು.
ಜಮಶೇಡ್ಡಿ ಪರವಾಲ್ಟಿ ತಾತಾ ಅವರು ಬೆಂಗಳೂರಿನಲ್ಲಿ ವಿಜ್ಞಾನ ಸಂಸ್ಥೆ ಯನ್ನು ಸ್ಥಾಪಿಸಿದರು. ಅದಕ್ಕೆ ಅಧ್ಯಕ್ಷರನ್ನಾಗಿ ರಾಮನ್ ಅವರನ್ನು ಚುನಾಯಿಸಿದರು.
ರಾಮನ್ ಅವರಿಗೆ ಆಲಸ್ಯ ಸಹಿಸಲಾಗುತ್ತಿರಲಿಲ್ಲ. ಬೆಳಗಿನ ಜಾವ ಮ ಕೊಂಡ ವಿದ್ಯಾರ್ಥಿಗಳಿಗೆ ಛೀಮಾರಿ ಹಾಕಿದರು. ಇವರು ಒಳ್ಳೆಯದನ್ನೇ ಮಾಡಬೇಕೆಂಬ ಛಲಗಾರರು. ಇವರ ನಿರ್ಭಿಡೆ, ನಿಷ್ಪಕ್ಷಪಾತ ಆಡಳಿತದಿಂದ ವಿದ್ಯಾರ್ಥಿಗಳಿಗೆ ಪ್ರೊಫೆಸರ್‌ರು ಬೇಸರಾದರು. ಆಗ ಮೈಸೂರು ಸರಕಾರದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ರಾಮನ್‌ರನ್ನು ಕಂಡು 'ನೀವು ಬೆಂಗಳೂರು ಬಿಡಬೇಡಿ. ನಿಮಗೆ ಬೇಕಾದ ಸಹಾಯ-ಸೌಲಭ್ಯಗಳನ್ನು ಒದಗಿಸಬೇಕೆಂದು ಮಹಾರಾಜರ ಅಪ್ಪಣೆಯಾಗಿದೆ ಎಂದು ಹೇಳಿ ರಾಮನ್ ರನ್ನು ಉಳಿಸಿಕೊಂಡರು.
1934 ಎಪ್ರಿಲ್ 27 ರಂದು ಬೆಂಗಳೂರಿನಲ್ಲಿ 'ಇಂಡಿಯನ್ ಅಕಾಡೆಮಿ ಆಫ್ ಎಂಬ ಹೆಸರಿನಲ್ಲಿ ಭಾರತ ವಿಜ್ಞಾನ ಸ್ಥಾಪಿಸಿದರು. ಪ್ರಾರಂಭದಲ್ಲಿ 160 ಮಂದಿ ಸ್ಥಾಪಕ ಸದಸ್ಯರಿದ್ದರು. ಪ್ರಪಂಚದ ಇತರ ಸಮಾನ ಧರ್ಮದ ವಿಜ್ಞಾನ ಸಂಸ್ಥೆಗಳಲ್ಲಿ ಈ ಸಂಸ್ಥೆಗೆ ಹಿರಿದಾದ ದೊರಕಿಸುವುದಕ್ಕೆ ರಾಮನ್ ತಮ್ಮ ತನು, ಮನ, ಧನಗಳನ್ನು ಅರ್ಪಿಸಿದರು. ಪಾರಿತೋಷಕದ ವೆಚ್ಚವಾಗದೆ ಉಳಿದ ಹಣವನ್ನು ತಮ್ಮ ಇತರ ಗಳಿಕೆಯ ಹಣವನ್ನು ಸೇರಿಸಿ ಈ ಸಂಸ್ಥೆಗೆ ದಾನವಾಗಿ ಕೊಟ್ಟರು.
ವಜ್ರಗಳ ಪರಿಶೋಧನೆಯನ್ನು ಬೆಂಗಳೂರಿನಲ್ಲಿ ಮುಂದುವರಿಸುತ್ತಿದ್ದ ಆ ಕಾಲದಲ್ಲಿ ಅಮೇರಿಕಾದ ಫ್ರಾಂಕ್ಲಿನ್ ಇನ್ಸ್ಟಿಟ್ಯೂಟ್ ರಾಮನ್ ಅವರಿಗೆ ತನ್ನ ಅತ್ಯುನ್ನತವಾದ ಪ್ರಶಸ್ತಿ ನೀಡಿ ಗೌರವಿಸಿತು.
ಭಾರತ ಸರಕಾರ ಮೊದಲಬಾರಿಗೆ 1954ರಲ್ಲಿ 'ಭಾರತರತ್ನ' ಎಂಬ ಉನ್ನತ ವರ್ಗದ ಪ್ರಶಸ್ತಿಯನ್ನು ಚಕ್ರವರ್ತಿ ರಾಜಗೋಪಾಲಾಚಾರ್ಯ, ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಚಂದ್ರಶೇಖರ್ ವೆಂಕಟರಾಮನ್ ಅವರಿಗೆ ಕೊಟ್ಟು ಗೌರವಿಸಿತು. ಈ ಮೊದಲೇ ಮೈಸೂರು ಸರಕಾರವು 'ರಾಜಸಭಾ ಭೂಷಣ' ಎಂಬ ತನ್ನ ಉನ್ನತ ಬಿರುದನ್ನಿತ್ತು ಅನರ್ಥ್ಯವಾದ ಪದಕದಿಂದ ರಾಮನ್ ಅವರನ್ನು ಅಲಂಕರಿಸಿತ್ತು.ಇವರು ನವಂಬರ್ 21 ಶನಿವಾರ 1970ರ ಬೆಳಗಿನಲ್ಲಿ ತೀರಿಕೊಂಡರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ