ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 13 ನೇ ದಿನ
ಭಾರತದ ಮಹಾನ್ ವಿಜ್ಞಾನಿಗಳು
13. ಡಾ, ಬೀರಬಲ್ ಸಾಹನೀ
ಭಾರತೀಯ ವನಸ್ಪತಿ ವಿಜ್ಞಾನದ ಜನಕ ತಾ ಬೀರಬಲ್ ಸಾಹನೀಯವರ ಜನ್ಮ 14 ನವಂಬರ್1891 ರಂದು ಪಶ್ಚಿಮ ಪಂಜಾಬದ ಶಾಹಪುರ ಜಿಲ್ಲೆಯಲ್ಲಾಯಿತು.ಅವರ ತಂದೆ ರಸಾಯನ ವಿಜ್ಞಾನದ ಅಧ್ಯಾಪಕರಿದ್ದರು. ಇದೇ ಕಾರಣದಿಂದಲೇ ಬಾಲ್ಯದಲ್ಲಿ ಮನೆಯಲ್ಲಿ ವಿಜ್ಞಾನದ ವಾತಾವರಣ ದೊರೆಯಿತು. ಹಾಗೆಯೇ ಇದರಲ್ಲಿ ಅವರ ಅಭಿರುಚಿ ಬೆಳೆಯಿತು. ಅವರ ಊರು ಉಪ್ಪಿನ ಗುಡ್ಡೆಗಳ ಸಮೀಪವಿದ್ದಿತು. ಅವರು ಅಲ್ಲಿಯ ಸಮೀಪದ ಗುಡ್ಡ ಮತ್ತು ಹಾಡುಗಳಿಂದ ಬಳ್ಳಿ, ಜಂತುಗಳ ಜೀವಾಶ್ಯವನ್ನು ಕೂಡಿಹಾಕುತ್ತಿದ್ದರು, ತಾರುಣ್ಯದಲ್ಲಿಯೇ ಸಾಹನಿ ಅವರಿಗೆ ವನಸ್ಪತಿ ಹಾಗೂ ಭೂವಿಜ್ಞಾನದಲ್ಲಿ ಅಧಿಕ ರುಚಿ ಇದ್ದಿತು.
1911ರಲ್ಲಿ ಪಂಜಾಬ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಮಾಡಿಕೊಂಡ ನಂತರ ಕೇಂಬ್ರಿಜ್ಗೆ ಹೋದರು. ಅಲ್ಲಿ ಪೂರಾ ವನಸ್ಪತಿ ಶಾಸ್ತ್ರಜ್ಞ ಪ್ರೊ. ಸ್ವೀರ್ಡರ್ ನಿರ್ದೇಶನದಲ್ಲಿ ಶೋಧ ಕಾರ್ಯ ನಡೆಸಿದರು. ಈ 1919ರಲ್ಲಿ ಜೀವಾಶ್ಮ ಬಳ್ಳಿ ಫರ್ನ, ಕೋನಿಫರ್ಸ್ ,ಮುಂತಾದವುಗಳ ಅಧ್ಯಯನಕ್ಕಾಗಿ ಲಂಡನ್ ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರ್ ಡಿಗ್ರಿ ನೀಡಿತು. ಕೇಂಬ್ರಿಜ್ ಮುಖಾಂತರ 1929ರಲ್ಲಿ ಡಿ.ಎಸ್ಸಿ, ಡಿಗ್ರಿ ಪಡೆಯುವಲ್ಲಿ ಭಾರತೀಯ ವಿಜ್ಞಾನಿ ಬೀರಬಲ್ ಸಾಹಯವರು ಪ್ರಥಮರೆನಿಸಿದರು.
ಡ, ಸಾಹನೀ ಒಬ್ಬ ಮಹಾನ್ ಪೆಲಿಯೋ ಬೋಟಾನಿಷ್ಠರಿದ್ದರು. (ಚಿಟ್ಟಾಣಿ ಗಳಲ್ಲಿ) ಚಿಕ್ಕ ಚಿಕ್ಕ ಗುಡ್ಡಗಳಲ್ಲಿ ಬೆಳೆದ ಹಳೆಯ ವನಸ್ಪತಿ ಗಳನ್ನು ಅಭ್ಯಸಿಸುವ ವಿಜ್ಞಾನಿಗೆ ಜೀವಾಶ್ಮ ವನಸ್ಪತಿ ವಿಜ್ಞಾನಿ ಎನ್ನಲಾಗುತ್ತದೆ. ಗುಡ್ಡಗಳನ್ನು ಕರೆಯುವುದು,ಕರಗಿಸುವುದಕ್ಕೆ ಬೇಕಾಗುವ ಉಪಕರಣಗಳ ಅಭಾವವಿದ್ದರೂ ಸಾಹನೀ ಇದನ್ನು ತಮ್ಮ ಕೈಯಿಂದಲೇ ಮಾಡುತ್ತಿದ್ದರು.
ಡಾ. ಬೀರಬಲ್ ಸಾಹನೀ ಭಾರತೀಯ ಗೂಂಡವಾನಾದ ಗಿಡ-ಬಳ್ಳಿ ಗಳನ್ನು ಆಳವಾಗಿ ಅಭ್ಯಸಿಸಿದವರಲ್ಲಿ ಇವರೇ ಪ್ರಥಮ ವನಸ್ಪತಿ ವಿಜ್ಞಾನಿಗಳಾಗಿದ್ದರು,
ಡಾ. ಸಾಹನೀ ಬಿಹಾರ್ದ ರಾಜಮಹಲ್ ಪರ್ವತವನ್ನು ಶೋಧಿಸಿದರು, ಅಲ್ಲಿ ಪ್ರಾಚೀನ ವನಸ್ಪತಿಗಳ ಜೀವಾಶ್ಮಗಳು ಅತ್ಯಧಿಕವಾಗಿದ್ದವು. 'ಜಿನ್ನೋಸ್ಕರ್ಮ" ಎಂಬ ಹೆಸರಿನ ಹೊಸ ಸಮೂಹವನ್ನು ಶೋಧಿಸಿದರು. ಆದರಿಂದ ಇಡೀ ವಿಶ್ವವೇ ಅವರತ್ತ ಆಕರ್ಷಿತವಾಯಿತು. ಅವರ ಪ್ರಯೋಗದ ಫಲವಾಗಿ (ಅನುಸಂಧಾನ) ಇಂದು ನಾವು ಅನೇಕ ಜಟಿಲ ಸಮಸ್ಯೆಗಳಿಗೆ ಸಮಾಧಾನ ಹೇಳುವಂತಾಗಿದ್ದೇವೆ, ಅವರು ಗೋಸಿ ಪ್ರಟಿರಸ ವನಸ್ಪತಿ ಉತ್ಪತ್ತಿಯ ಅಧ್ಯಯನಕ್ಕಾಗಿ ಒಂದುಪ್ರತ್ಯೇಕ ಪ್ರಯೋಗ ಶಾಲಾ ನಿರ್ಮಿಸಲಿಚ್ಚಿಸಿದರು. ಈ ಸಂಬಂಧವಾಗಿ ಅವರು ಯುರೋಪ್, ಅಮೇರಿಕಾ ಮತ್ತು ಕೆನಡಾಗಳಿಗೆ ಹೋದರು. ೩ ಎಪ್ರಿಲ್ ೧೯ರ್೪ಕ್ಕೆ ಜವಾಹರಲಾಲ ನೆಹರೂ ಮುಖಾಂತರ ಆಖನೌದಲ್ಲಿ ಇನ್ಸ್ಟಿಟ್ಯೂಟ್ ಆಫ್ ಪೆಲಿಯೋ ಬಾಟನಿಯ ಶಂಕು ಸ್ಥಾಪನೆಯಾಯಿತು. ಆದರೆ ದುರ್ಭಾಗ್ಯ - ಇದಾದ ಒಂದು ವಾರದಲ್ಲಿ ಸಾಹನೀ ಮರಣ ಹೊಂದಿದರು. ಅವರ ಅಪೂರ್ಣ ಕಾರ್ಯವನ್ನು ಅವರ ಪತ್ನಿಯು ಪೂರ್ಣಗೊಳಿಸಿದರು. ಜೊತೆಗೆ ಅವರ ಸಂಸ್ಥೆ ಬೀರಬಲ್ ಸಾಹನಿ ಇನ್ ಸ್ಟಿಟ್ಯೂಟ್ ಆಫ್ ಪಲಿಯೋ ಬಾಟನಿಯ ಸಂಚಾಲನೆ ಯನ್ನು ಅತ್ಯಂತ ಕುಶಲತೆಯಿಂದ ನಿರ್ವಹಿಸುತ್ತಿದ್ದರು. ಇದೊಂದು ವಿಶ್ವದಲ್ಲೇ ತನ್ನದೇ ಆದ ಪ್ರಥಮ ಇನ್ಸ್ಟಿಟ್ಯೂಟ್ ಆಗಿದೆ.
ವನಸ್ಪತಿ ಮತ್ತು ಭೂವಿಜ್ಞಾನಿಗಳಲ್ಲದ, ಡಾ. ಬೀರಬಲ್ ಸಾಹನಿ ಯವರಿಗೆ ಪುರಾತತ್ವ ವಿಜ್ಞಾನದಲ್ಲೂ ರುಚಿ ಇದ್ದಿತು. ಅವರು ಪ್ರಾಚೀನ ಭಾರತದಲ್ಲಿ ನಾಣ್ಯ ಮುದ್ರಿಸುವ ವಿಧಿಯನ್ನು ಅಭ್ಯಸಿಸಿದರು ಹಾಗೂ ಅವರು ಇದೇ ಶೋಧದಲ್ಲಿ ಅವರು 'ಮಿಸ್ಮೆಟಿಕ್ ಸೊಸಾಯಿಟಿ ಆಫ್ ಇಂಡಿಯಾ'ದ “ನೆಲ್ಲಡ್ ರೈಡ್" ಪದಕ ಪ್ರಾಪ್ತವಾಯಿತು.
ಡಾ. ಸಾಹನೀ ವಿದೇಶೀ ಸಂಸ್ಥೆಗಳ ವಿಕಾಸದಲ್ಲೂ ತಮ್ಮ ಪೂರ್ಣ ಸಹಕಾರ ನೀಡಿದರು. ಅವರು ವಿಶ್ವ ವನಸ್ಪತಿ ಕಾಂಗ್ರೆಸ್ದ ಪುರಾ ವನಸ್ಪತಿ ಶಾಖೆಯ ಉಪಾಧ್ಯಕ್ಷರಾಗಿದ್ದರು. ಅವರು ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಅಧ್ಯಕ್ಷ ರಾಗಿಯೂ ಕಾರ್ಯ ಮಾಡಿದರು.
ಸನ್ 1936 ರಲ್ಲಿ ರಾಯಲ್ ಸೊಸಾಯಿಟಿಯು ಡಾ. ಸಾಹನೀ ಅವರನ್ನು ತನ್ನ ಸದಸ್ಯರನ್ನಾಗಿ ಮಾಡಿಕೊಂಡಿತು. ಭಾರತ ಸರಕಾರದಿಂದ ಅವರಿಗೆ ರಾಷ್ಟ್ರೀಯ ಅಧ್ಯಾಪಕರೆಂಬ ಗೌರವ ಪ್ರಾಪ್ತವಾಯಿತು. ಇಂತಹ ಮಹಾನ್ ವೈಜ್ಞಾನಿಕ ಡಾ. ಬೀರಬಲ್ ಸಾಹನಿ 10 ಏಪ್ರಿಲ್1949ರಂದು ನಿಧನರಾದರು. ಒಬ್ಬ ವೈಜ್ಞಾನಿಕರಾಗಿದ್ದರೂ ಅವರು ಸಂಗೀತ ಪ್ರಿಯರಾಗಿದ್ದರು. ಅವರು ನುರಿತ ವಾಯಲಿನ್ ವಾದಕರೂ ಆಗಿದ್ದರು. ಅವರ ನೆನಪಿಗಾಗಿ ವಿಜ್ಞಾನದ ವಿಭಿನ್ನ ಕ್ಷೇತ್ರಗಳಲ್ಲಿ ಅಸಾಧಾರಣ ಕಾರ್ಯ ಮಾಡಿದ ವಿಜ್ಞಾನಿಗಳಿಗೆ 'ಬೀರಬಲ್ ಸಾಹನೀ” ಸ್ಥರಣಾರ್ಥ ಪುರಸ್ಕಾರ ನೀಡಲಾಗುತ್ತಿದೆ.
2 ಕಾಮೆಂಟ್ಗಳು:
ನಾವು , ನಮ್ಮ ದೇಶ ; ನಮ್ಮ ಹೆಮ್ಮೆ.
Tq madam
ಕಾಮೆಂಟ್ ಪೋಸ್ಟ್ ಮಾಡಿ