ಭಾನುವಾರ, ನವೆಂಬರ್ 15, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 14 ನೇ ದಿನ-ಸಿರಾಮಿಕ್ ವಿಜ್ಞಾನಿ ಡಾ.ಆತ್ಮರಾಮರ ಪರಿಚಯ.

 

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 14 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು



 14.ಡಾ. ಅತ್ಮರಾಮ




ಪದ್ಮಶ್ರೀ ಉಪಾಧಿಯಿಂದ ಸನ್ಮಾನಿತ ಡಾ. ಆತ್ಮರಾಮ ಅಂತಾರಾಷ್ಟ್ರೀಯ ಖ್ಯಾತಿ ಪ್ರಾಪ್ತಿ ವೈಜ್ಞಾನಿಕರು. ಅವರು ಗಾಜು ಮತ್ತು ಸಿರೋಮಿಕ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ವೈಜ್ಞಾನಿಕ ಸಂಶೋಧನೆಗಳನ್ನು ಮಾಡಿದ್ದಾರೆ.


ಡಾ. ಆತ್ಮರಾಮರ ಜನ್ಮ ಉತ್ತರ ಪ್ರದೇಶದ ಪಿಲಾನಾ ಎಂಬ ಗ್ರಾಮದಲ್ಲಿ 12 ಅಕ್ಟೋಬರ್ 1908ರಲ್ಲಾಯಿತು. ಅವರ ತಂದೆ ಒಬ್ಬ ಸರಕಾರೀ ಗುಮಾಸ್ತರು. ಡಾ. ಆತ್ಮರಾಮರು 1922 ರಲ್ಲಿ ಚಾಂದಪುರದಿಂದ ಮಿಡಲ್ ಸ್ಕೂಲ ಹಾಗೂ 1924 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಮೆಟ್ರಿಕ್ ಪಾಸಾದರು. ತಮ್ಮ ಶಿಕ್ಷಣಕ್ಕಿರುವ ಆರ್ಥಿಕ ತೊಂದರೆಗಳನ್ನು ದೂರ ಮಾಡಲು ಅವರು ವಿದ್ಯಾರ್ಥಿಗಳಿಗೆ ಟ್ಯೂಶನ್ ಹೇಳಿದರು.


ಡಾ. ಆತ್ಮರಾಮ ಅತ್ಯಂತ ದೃಢ ನಿಶ್ಚಯಿಗಳಾಗಿದ್ದರು. ಬಿ.ಎಸ್‌ಸಿ.ಯಲ್ಲಿ ಹೆಚ್ಚಿನ ಮಾರ್ಕ್ಸ್ ದೊರೆತು ಪಾಸಾಗಿದ್ದರು, ಅವರಿಗೆ ಎಂ.ಎಸ್ಸಿಗೆ ಪ್ರವೇಶ ಸಿಗಲಿಲ್ಲ. ಆದರೂ ಅವರು ತಮ್ಮ ನಿಶ್ಚಯದಿಂದ ವಿಮುಖರಾಗಲಿಲ್ಲ. ಅವರು ಪ್ರೊ. ಧರ ಹೇಳುತ್ತಿದ್ದ ವ್ಯಾಖ್ಯಾನಗಳನ್ನು ಕ್ಲಾಸಿನ ಹೊರಗೆ ನಿಂತು ಕೇಳಿಕೊಳ್ಳುತ್ತಿದ್ದರು. ಈ ರೀತಿ ಬಹು ದಿನಗಳವರೆಗೆ ಸಾಗಿತು. ಕೊನೆಗೆ ಪ್ರೋ ಧರ್' ಅವರೇ ಡಾ. ಆತ್ಮರಾಮರಿಗೆ ತಮ್ಮ ಮಹಾವಿದ್ಯಾಲಯದಲ್ಲಿ ಪ್ರವೇಶ ನೀಡಿದರು. 1931 ರಲ್ಲಿ ಅವರು ಅಲಹಾಬಾದ ವಿಶ್ವವಿದ್ಯಾಲಯದಿಂದ ಪ್ರಥಮ ಸ್ಥಾನದಲ್ಲಿ ಎಂ.ಎಸ್ ಸಿ, ಪಾಸಾದರು.


1936 ರಲ್ಲಿ ಅವರು ಪ್ರಕಾಶ ರಾಸಾಯನಿಕ ಪ್ರತಿಕ್ರಿಯೆಯ ಮೇಲೆ ಸಂಶೋಧನೆ ನಡೆಸಿ 'ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದರು.


1936 ರಲ್ಲಿಯೇ ಡಾ. ಆತ್ಮರಾಮ ಭಾರತೀಯ ಔದ್ಯೋಗಿಕ ಸಂಶೋಧನ ಸಂಸ್ಥೆಯಲ್ಲಿ ಡಾ. ಶಾಂತಿಸ್ವರೂಪ ಭಟನಾಗರ ಹಾಗೂ ಡಾ. ಮೇಘನಾದ ಸಾಹಾ ಅವರಂತಹ ವೈಜ್ಞಾನಿಕರ ಸಂಪರ್ಕದಲ್ಲಿ ಬಂದರು. ಅದು ಅವರ ಜೀವನದ ಮೇಲೆಯೇ ಅತ್ಯಂತ ಮಹತ್ವಪೂರ್ಣ ಪ್ರಭಾವ ಬೀರಿತು.


ಈ ಸಂಸ್ಥಾನದಲ್ಲಿ ದ್ವಿತೀಯ ಜಾಗತಿಕ ಮಹಾಯುದ್ಧದ ಕಾಲಕ್ಕೆ ಡಾ. ಆತ್ಮಾರಾಮರು ಅಗ್ನಿನಾಶಕ ಪದಾರ್ಥದ ಶೋಧ ಮಾಡಿದರು.


1945 ರಲ್ಲಿ ದೇಶದ ಪ್ರಥಮ ಗಾಜು ಮತ್ತು ಸಿರೇಮಿಕ್ ಅನುಸಂಧಾನ ಶಾಲೆ ಸ್ಥಾಪಿಸಿದರು. ಅದರಲ್ಲಿ ಅವರು ಒಬ್ಬ ವೈಜ್ಞಾನಿಕ ಹಾಗೂ ಕುಶಲ ಆಡಳಿತಾಧಿಕಾರಿಯ ರೂಪದಲ್ಲಿ ಕಾರ್ಯ ಮಾಡಿದರು. 1952 ರಲ್ಲಿ ಅವರನ್ನು ಈ ಸಂಸ್ಥಾನದ ನಿರ್ದೇಶಕರನ್ನಾಗಿ ಮಾಡಲಾಯಿತು.


ಡಾ. ಆತ್ಮರಾಮರ ಎಲ್ಲಕ್ಕಿಂತ ಮಹತ್ವಪೂರ್ಣ ಶೋಧವೆಂದರೆ ಆಪ್ಟಿಕಲ್ ಗ್ರಾಸ (ಚಾಗ್ಲಾಸ) ಅಥವಾ ಸಮಾಂಗಿ ಗಾಜು ಮಾಡುವ ವಿಧಿಯು. ಇದೇ ಶೋಧದ ಪರಿಣಾಮವು. ಇದರಿಂದ ದೇಶದ ಸೇನೆಯ ಕಾರ್ಯಕ್ಕಾಗಿ ಉಪಯೋಗ ವಾಗುವ ಎಲ್ಲ ಪ್ರಕಾರದ ಗಾಜು ನಿರ್ಮಿತವಾಗತೊಡಗಿತು.


ಎದೇಶ ಕಂಪನಿಗಳು ಕಠಿಣ ಶರತ್ತುಗಳನ್ನು ಪೂರ್ಣಗೊಳಿಸಲಾರದ ಕಾರಣ ಸಮಾಂಗಿ ಗಾಜು ಭಾರತದಲ್ಲಿ ನಿರ್ಮಾಣವಾಗಲಾರದಂತಾಯಿತು. 1956 ರಲ್ಲಿ ಈ ಕಾರ್ಯವನ್ನು ಡಾ. ಆತ್ಮರಾಮರಿಗೆ ಒಪ್ಪಿಸಲಾಯಿತು. ಅವರು ಸತತ ಎರಡು ವರ್ಷಗಳ ಪರಿಶ್ರಮದಿಂದ ಸಮಾಂಗಿ ಗಾಜು ನಿರ್ಮಿಸಲು ಸಫಲಾದರು. 1960ರಿಂದ ದೇಶದಲ್ಲಿಯೇ 'ಸಮಾಂಗಿ' ಗಾಜಿನ ನಿರ್ಮಾಣವಾಗತೊಡಗಿದೆ.


ಇಂದು ಭಾರತವೂ ವಿಶ್ವದ ಆರು ಪ್ರಮುಖ ಸಮಾಂಗಿ ಗಾಜಿನ ನಿರ್ಮಾಣದಲ್ಲಿ ಒಂದೆಂದು ಪರಿಗಣಿಸಲಾಗಿದೆ. ತಮ್ಮ ಈ ಮಹತ್ವಪೂರ್ಣದ ಶೋಧದಿಂದಾಗಿ ಅವರು ದೇಶ-ವಿದೇಶಗಳಲ್ಲಿ ಅತ್ಯಂತ ಪ್ರಸಿದ್ಧರಾದರು. ಇದಲ್ಲದೆ ಅವರು ಬಣ್ಣದ ಇನ್, ಸಿಲ್ವೇಅವರುಯುಕ್ತ ಕೆಂಪು ಸಮು ಮುಂತಾದವುಗಳನ್ನು ನಿರ್ಮಿಸುವಲ್ಲಿ ಮುಂದಾದರು.


ಡಾ, ಆತ್ಮರಾಮರು ದೇಶದಲ್ಲಿ ದೊರೆಯುವ ಪದಾರ್ಥಗಳಿಂದ ಆಪ್ಟಿಕಲ ಇಾಸ ನಿರ್ಮಿಸುವ ವಿಧಿಯನ್ನು ವಿಕಾಸಗೊಳಿಸಿದರು. ಬಾಜು ಹಾಗೂ ಸಿರಾಮಿಕ ಅನುಸಂಧಾನ ಸಂಸ್ಥಾನದಲ್ಲಿ ಅಪ್ಪಿಕಲ್ ಗ್ಲಾಸ್‌ ನಿಲ್ದಾಣವಾಗುತ್ತದೆ. ಡಾ, ಆತ್ಮಾರಾಮರ ಸತತ ಪ್ರಯತ್ನ ಹಾಗೂ ಸಂಶೋಧನೆಯ ಫಲಶೃತಿಯೇ ಇಂದು ಸಮಾಂಗಿ ಅಥವಾ ಆಪ್ಟಿಕಲ್ ಇಾನ ಪನಡುಬ್ಬಿ, ಪೆರಿಸ್ಕೋಪ, ದುರ್ಬೀನ, ಕ್ಯಾಮರಾ ಹಾಗೂ ಚಿಕಿತ್ಸಾ ಕ್ಷೇತ್ರಗಳಲ್ಲಿ ಅನೇಕ ರೀತಿಯಲ್ಲಿ ಉಪಯೋಗವಾಗತೊಡಗಿದೆ.


ಬೈಟನ್ನಿನ ಗಾಜಿಗೆ ಉದ್ಯೋಗ ಸಂಸ್ಥೆಯು 1966 ರಲ್ಲಿ ಡಾ. ಆತ್ಥರಾದ ರನ್ನು ತಮ್ಮ ಸದಸ್ಯರನ್ನಾಗಿ ಮಾಡಿಕೊಂಡು ಸನ್ಮಾನಿಸಿತು. 1959ರಲ್ಲಿ ವಿಜ್ಞಾನ ಹಾಗೂ ಪ್ರೊದ್ಯೋಗಿಕ ಕ್ಷೇತ್ರದಲ್ಲಿ ಮಾಡಿದ ಮಹತ್ವಪೂರ್ಣ ಸಂಶೋಧನೆಗಾಗಿ ಭಾರತ ಸರಕಾರವು ಅವರಿಗೆ 'ಪದ್ಮಶ್ರೀ' ಉಪಾಧಿಯಿಂದ ಸಷ್ಟಾನಿಸಿತು. 1959ರಲ್ಲಿಯೇ ಭಾರತೀಯ ರಾಷ್ಟ್ರೀಯ ವಿಜ್ಞಾನ ಸಂಸ್ಥಾನದ ಡಾ. ಆತ್ಮರಾಮರಿಗೆ ಚಾ, ಶಾಂತಿ ಸ್ವರೂಪ ಭಟನಾಗರ ಪುರಸ್ಕಾರದಿಂದ ಸನ್ಮಾನಿಸಿತು. ಅಲ್ಲದೆ ಶುಲಸಿ ಆಗುವತ ಪುರಸ್ಕಾರದಿಂದಲೂ ಸನ್ಮಾನಿಸಲಾಯಿತು.


ಡಾ.ಆಕಾರಾಮರ ರಸಾಯನ, ಗಾಜು, ಸಿರಾಮಿಕ ಮೊದಲಾದ ವಿಷಯ ಗಳ ಮೇಲೆ ಎಷ್ಟೋ ಮಹತ್ವಪೂರ್ಣ ಲೇಖನಗಳು ಪ್ರಕಟಗೊಂಡಿವೆ. ಅವರು ಬರೆದ ಪುಸ್ತಕ -1 ರಸಾಯನ ಶಾಸ್ತ್ರದ ಕಥೆ ಪ್ರಸಿದ್ದವಿದೆ. ಸದಾ, ಸರಳ ಜೀವನ ನಡೆಸುತ್ತಿದ್ದ ಈ ಮಹಾನ್ ವೈಜ್ಞಾನಿಕರು 1985 ರಲ್ಲಿ ನಿಧನರಾದರು. ಪ್ರಯೋಗ ಶಾಲೆಯಲ್ಲಿ ಮಾಡಲಾದ ಸಂಶೋಧನೆಗಳು ಮುಂದೆ ಫ್ಯಾಕ್ಟರಿ, ಕಾರಖಾನೆ ವರೆಗೆ ಮುಟ್ಟ ದೇಶದ ಉನ್ನತಿಯಾಗಬೇಕೆಂಬುದೇ ಡಾ ಆತ್ಮರಾಯರ ಇಚ್ಛೆಯಾಗಿತ್ತು,






ಕಾಮೆಂಟ್‌ಗಳಿಲ್ಲ:

Newtons first law experiment