ಸೋಮವಾರ, ನವೆಂಬರ್ 16, 2020

ದಿನಕ್ಕೊಂದು ಪ್ರೇರಣೆ-ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 15 ನೇ ದಿನ-ವಿಜ್ಞಾನಿ ಕೆ.ಎಸ್.ಕೃಷ್ಣನ್ ಪರಿಚಯ

.ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 15 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು


15. ಕೆ. ಎಸ್. ಕೃಷ್ಣನ್




ಒಬ್ಬ ಬಾಲಕ ಕೆರೆಯ ದಂಡೆಯಲ್ಲಿ ಕುಳಿತು ಸಂಸ್ಕೃತ-ಶ್ಲೋಕಗಳನ್ನು ಗುನಗುನಿಸುತಿದ್ದನು. ಮತ್ತು ಸುತ್ತಲಿನ ಪ್ರಾಕೃತಿಕ ದೃಶ್ಯಗಳಿಂದ ಸಂತೋಷ ಪಡುತ್ತಿದ್ದನು. ಆದರೇನು ಅವನ ಮನಸ್ಸು ಮಾತ್ರ ಏನನ್ನೋ ಶೋಧಿಸುವದರಲ್ಲಿ ತಲ್ಲೀನವಾಗಿತ್ತು. ನೀರಿನ ಎತ್ತರೆತ್ತರ ತೆರೆಗಳನ್ನು ನೋಡಿ ಆತನ ಮನದಲ್ಲಿ ಅನೇಕ ಪ್ರಶ್ನೆಗಳು ಏಳುತ್ತಿದ್ದವು. ಮುಂದೆ ಇದೇ ಬಾಲಕನೇ ಕೃಷ್ಣನ್ ಎಂಬ ಹೆಸರಿನಿಂದ ಪ್ರಸಿದ್ಧ ವಿಜ್ಞಾನಿಯಾದರು. ಅವರು ಅನೇಕ ಪ್ರಾಕೃತಿಕ ರಹಸ್ಯಗಳನ್ನು ಬಯಲಿಗೆಳೆದರು. ಕೃಷ್ಣನ್ ಕೇವಲ ಒಬ್ಬ ವಿಜ್ಞಾನಿಯಾಗಿರದೇ ಒಬ್ಬ ಭೌತಿಕ ಶಾಸ್ತ್ರಿ ಹಾಗೂ ದಾರ್ಶನಿಕರು ಆಗಿದ್ದರು. ಅವರ ಜನ್ಮ 4 ಡಿಸೆಂಬರ 1898 ರಲ್ಲಿ ತಮಿಳನಾಡಿನ ರಾಮನಾಡು ಜಿಲ್ಲೆಯಲ್ಲಾಯಿತು.


ಕೃಷ್ಣನ್ ತಮ್ಮ ಜೀವನವನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಸಲು ಇಚ್ಚಿಸುತ್ತಿದ್ದರು. ಅವರು ಭೌತಿಕ ಅಧ್ಯಯನಕ್ಕಾಗಿ ಕಲಕತ್ತೆಯ ಯುನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ದಲ್ಲಿ ಎಂ.ಎಸ್ಸಿ.ಗೆ ದಾಖಲಾದರು. ಆ ಕಾಲಕ್ಕೆ ಈ ವಿದ್ಯಾಲಯದಲ್ಲಿ ಡಾ. ಸಿ. ವಿ. ರಾಮನ್‌ರ ಭಾಷಣದಿಂದ ಕೃಷ್ಣನ್ ಒಳ್ಳೆ ಪ್ರಭಾವಿತರಾದರು. 1923 ರಿಂದ ಅವರು ಡಾ. ರಾಮನ್‌ರೊಂದಿಗೆ ಇಂಡಿಯನ್ ಆಸೋಸಿಯೇಶನ್ ಫಾರ್ ದಿ ಕಲ್ಟಿವೇಶನ್ ಆಫ್ ಸಾಯಿನ್ದ ಪ್ರಯೋಗ ಶಾಲೆಯಲ್ಲಿ ಕಾರ್ಯಾರಂಭ ಮಾಡಿದರು. ರಾಮನ್ರ ಶೋಧದಲ್ಲಿ ಕೃಷ್ಣನ್‌ರಸಹಾಯವು ಇದ್ದಿತೆಂದು ಹೇಳಲಾಗುತ್ತದೆ. ಕೃಷ್ಣನ್ ಅಣುಗಳ ಆಂತರಿಕ ವಿಶೇಷತೆಗಳ ಜ್ಞಾನವನ್ನು ಸಂಪೂರ್ಣ ಜಗತ್ತಿಗೆ ತಿಳಿಸಿಕೊಟ್ಟರು.


1928 ರಲ್ಲಿ ಭೌತಿಕ ರೀಡರ್ ಆಗಿ ಢಾಕಾ ವಿಶ್ವವಿದ್ಯಾಲಯಕ್ಕೆ ನಡೆದರು, ಅಲ್ಲಿ ಕೃಷ್ಣನ್ ಅವರು ಸ್ಪಟಿಕ ಭೌತಿಕದ ಮೇಲೆ ಪ್ರಯೋಗ ನಡೆಸಿದರು. ಸ್ಪುಟಕದ ಆಂತರಿಕ ಸಂರಚನಾ ಹಾಗೂ ಚುಂಬುಕೀಯ ಗುಣಗಳ ನಡುವಿನ ಸಂಬಂಧಗಳನ್ನು ಸ್ಥಾಪಿಸಲು ಒಂದು ವಿಶೇಷ ಪ್ರಯೋಗಾತ್ಮಕ ವಿಧಿಯನ್ನು ಕಂಡುಕೊಂಡರು. 1933ರಲ್ಲಿ ಪುನಃ ಕಲ್ಕತ್ತೆಗೆ ಬಂದು ಅಸೋಸಿಯೆಷನ್ನಿನ ಪ್ರಯೋಗ ಶಾಲೆಯಲ್ಲಿ ನಿರತರಾದರು.


ಭೌತಿಕ ವಿಭಿನ್ನ ಕ್ಷೇತ್ರಗಳಲ್ಲಿ ಕೃಷ್ಣನ್‌ರದು ಮಹತ್ವಪೂರ್ಣಯೋಗವಾಗಿ ದ್ದಿತು. ಕ್ರಿಸ್ಟಲದಲ್ಲಿಟ್ಟ ಸುಂದರ ಸಂಯೋಜಕ, ಅಣುಗಳ ಪ್ರತಿಬದ್ಧತಾ ಕಾರಣ ವಾಗಿಯೇ ಎಂದು ತಿಳಿದ ಅವರು ಆಳವಾಗಿ ಅಭ್ಯಸಿಸಿದರು. ಕೃಷ್ಣನ್ ಕ್ರೋಮಿಯಮ್, ಲೋಹಾ' ಕಾರ್ಬನ್, ಕೋಬಾಲ್ಟ್ ಸುವರ್ಣ, ತಾಮ್ರ, ನಿಕ ೮ ಮುಂತಾದವುಗಳ ಸ್ಥಿರತೆಯನ್ನು ಗುರುತಿಸಿದರು.


ಪ್ರಯೋಗಾತ್ಮಕ ಭೌತಿಕ ಕ್ಷೇತ್ರದಲ್ಲಿ ಕೃಷ್ಣನ್ ಅವರು ನಿರ್ವಾತದಲ್ಲಿ ವಿದ್ಯುತ್‌ದಿಂದ ಕಾಯಿಸಿದ ಛಡಿಯಲ್ಲಿಯ ಉಷ್ಣತೆಯ ವಿಧಿಯ ಅಧ್ಯಯನ ನಡೆಸಿದರು. ಇದು ಔದ್ಯೋಗಿಕ ಕ್ಷೇತ್ರದಲ್ಲಿ ಬಹಳಷ್ಟು ಉಪಯುಕ್ತವಾಗಿದೆ.


ಕೃಷ್ಣನ್‌ರ ಸಂಶೋಧನೆಯು ಅವರನ್ನು ವಿಶ್ವ ಪ್ರಸಿದ್ಧರಯನ್ನಾಗಿ ಮಾಡಿತು. 1949 ರಲ್ಲಿ ಅವರು ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಅಧ್ಯಕ್ಷರಾದರು. 1953 ರಲ್ಲಿ ಯುನೆಸ್ಕೋದ ವೈಜ್ಞಾನಿಕ ಸಲಹಾಕಾರ ಸಮಿತಿಯ ಅಧ್ಯಕ್ಷರಾದರು.


1951 ಮತ್ತು 1957 ರ ನಡುವೆ ಅವರು ಅಂತರಾಷ್ಟ್ರೀಯ ಮತ್ತು ಪ್ರಾಯೋಗಿಕ ಭೌತಿಕ ಸಂಘದ ಉಪಾಧ್ಯಕ್ಷ ಮತ್ತು ಸಾಗರ ವಿಜ್ಞಾನ ಸಂಘದಲ್ಲಿ ಭಾರತದ ಪ್ರತಿನಿಧಿಯಾಗಿದ್ದರು.


ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಕೃಷ್ಣನ್ ಅವರಿಗೆ ಭಟ್ನಾಗರ್ ಪುರಸ್ಕಾರವನ್ನಿತ್ತರು. ಅವರು ತಮ್ಮ ಜೀವನ ಪರ್ಯಂತ ಸಂಶೋಧನೆಯಲ್ಲಿಯೇ ಭಾರತದ ಉನ್ನತಿಯನ್ನು ಚಿಂತಿಸಿದರು. ಇಂತಹ ಮಹಾನ್ ಭಾರತೀಯ ಸುಪುತ್ರನ ನಿಧನ 3 ಜೂನ್ 1961ರಲ್ಲಾಯಿತು. ಅವರಿಗೆ 1964 ರಲ್ಲಿ ಮರಣೋತ್ತರವಾಗಿ ಸರ್ ಪದವಿ ದೊರೆಯಿತು,ರಾಷ್ಟ್ರಪತಿಗಳು ಅವರನ್ನು 'ಪದ್ಮಭೂಷಣ' ಪದವಿಯಿಂದ ಅಲಂಕರಿಸಿದರು. 



2 ಕಾಮೆಂಟ್‌ಗಳು:

Shahid Basha N ಹೇಳಿದರು...

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಅತ್ಯುತ್ತಮವಾದದ್ದು ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಹಾಗೂ ಕೆಲವೊಂದು ಸಸ್ಯಗಳ ಬಗ್ಗೆಯೂ ಸಹ ಮಾಹಿತಿಯನ್ನು ಹಾಕಿರಿ. ಅಳಿವಿನಂಚಿನಲ್ಲಿರುವ ಸಸ್ಯಗಳು ಹಾಗೂ ಅವುಗಳ ಉಪಯೋಗಗಳು ಜೈವಿಕ ತಂತ್ರಜ್ಞಾನಕ್ಕೆ ಕೊಡುಗೆಯಾಗಿರುವ ಸಸ್ಯಗಳ ಬಗ್ಗೆಯೂ ಮಾಹಿತಿಯನ್ನು ಹಾಕಿರಿ.

Amarakosha ಹೇಳಿದರು...

Tq.sir.ಖಂಡಿತ ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ.

Newtons first law experiment