ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 16 ನೇ ದಿನ
ಭಾರತದ ಮಹಾನ್ ವಿಜ್ಞಾನಿಗಳು
ಡಾ. ದಿನೇಶ ಎ. ಕೇಸಕರ್
ಚಂದ್ರನ ಮೇಲೆ ಪ್ರಪ್ರಥಮವಾಗಿ ಹೆಜ್ಜೆ ಇದಿಸಿದ ಶ್ರೇಯಸ್ಸು ಅಮೇರಿಕೆಯ ಅಂತರಿಕ್ಷ ಯಾತ್ರಿ ನೀಲ್ ಆರ್ಮ್ಸ್ಟಾಂಗನಿಗೆ ಸಲ್ಲುತ್ತದೆ. ಅದೇ ಪ್ರೊ. ಆರ್ಮಾಂಗ್ನ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ ವಿಜ್ಞಾನಿ ಡಾ. ದಿನೇಶ ಕೇಸಕರರು.
ಡಾ. ಕೇಸಕರರು ಬೋಯಿಂಗ ಇಂಡಿಯಾ ಅಧ್ಯಕ್ಷರು. ಈ ಸಂಸ್ಥೆಯು ಬೋಯಿಂಗ್ ವಿಮಾನ ನಿರ್ಮಿಸುವ ವಿಶ್ವದ ಶ್ರೇಷ್ಟ ಕಂಪನಿ ಯಾಗಿದೆ. ಇದರ ಮುಖ್ಯ ಕಾದ್ಯಾಲಯ ಹಾಗೂ ಕಾರಖಾನೆ ಸಿಎಟಲ (ಅಮೇರಿಕಾ) ದಲ್ಲಿದೆ. ಭಾರತದಲ್ಲಿ ಬೋಯಿಂಗ್ ಕಾರ್ಯಭಾರ ಹೆಚ್ಚಿಸುವ ಜವಾಬ್ದಾರಿ ಡಾ. ಕೇಸಕರ್ರ ಮೇಲಿದೆ. ಇದಕ್ಕೂ ಮೊದಲು ಅವರು ಬೋಯಿಂಗ್ ಕಮರ್ಸಿಯಲ್ ಏರ್ಲೈನ್ ಗ್ರೂಪ್ನಲ್ಲಿ ಅಂತಾರಾಷ್ಟ್ರೀಯ ಮಾರಾಟ ನಿರ್ದೇಶಕರಾಗಿದ್ದರು.
ಸೌಮ್ಯ ವ್ಯಕ್ತಿತ್ವ ಹಾಗೂ ಸರಳ ವ್ಯವಹಾರದ ಡಾ. ಕೇಸಕರ ತಾಯಿ ತಂದೆಗಳ ಮಾತು ಬಂದಾಗ ಭಾವುಕರಾಗುತ್ತಾರೆ. ಮಾತು-ಪಿತೃರ ಆಶೀರ್ವಾದ ದಿಂದಲೇ ನಾನು ಇಂದು ಈ ಅಧಿಕಾರದಲ್ಲಿದ್ದೇನೆ. ತಂದೆ ಪ್ರೊಫೆಸರರಿದ್ದರು. ನನ್ನ ಮೇಲೆ ಅವರ ಪ್ರಭಾವ ಬಹಳ, ಅವರು ತೀವ್ರವೇ ಮರಣ ಹೊಂದಿದರು. ನಂತರ ತಾಯಿಯೇ ನನ್ನನ್ನು ಸಾಕಿ ಸಲುಹಿ ಓದಿಸಿದರು ಎಂದು ಕೇಸಕರ ನೆನೆಯುತ್ತಾರೆ.
ಮಹಾರಾಷ್ಟ್ರದಿಂದ 1975 ರಲ್ಲಿ ಅವರು ಮೆಕ್ಯಾನಿಕಲ್ ಇಂಜನಿಯರಿಂಗ್ ದಲ್ಲಿ ಬಿ.ಇ. ಡಿಗ್ರಿ ಗೋಲ್ಲಿ ಮಡಲಿನೊಂದಿಗೆ ತೆಗೆದುಕೊಂಡರು. ಆಗಲೇ ಅವರಿಗೆ ಅಮೇರಿಕೆ, ಸಿನಸಿನೇಟಿ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ನೀಲ್ ಆರ್ಮ್ಸ್ಟಾಂಗರು ಇದ್ದಾರೆಂದು ತಿಳಿಯಿತು. ಡಾ. ಕೇಸರ್ಕರು ವಿದ್ಯಾರ್ಥಿ ವೇತನದೊಂದಿಗೆ ಅಲ್ಲಿ ಪ್ರವೇಶ ಪಡೆದರು.
1976 ರಲ್ಲಿ ಡಾ. ಕೇಸರ್ಕರು ಎಂ.ಎಸ್ಸಿ. ಹಾಗೂ ಎರಡು ವರ್ಷಗಳ ನಂತರ ವಾಯು-ಅಂತರಿಕ್ಷ ಯಾತ್ರಿಯಲ್ಲಿ ಪಿ.ಎಚ್.ಡಿ ಮಾಡಿಕೊಂಡರು.ಇದರ ನಂತರ1987ರಲ್ಲಿ ಸಿಎಟದಲ್ಲಿಯ ಸಿಟಿ ಯುನಿವರ್ಸಿಟಿಯಿಂದ ಎಂ.ಬಿ.ಎ. ಪೂರ್ಣ ಮಾಡಿದರು ಹಾಗೂ ಅದರಲ್ಲಿ ಹೆಚ್ಚಿನ ಅಂಕಗಳಿಂದ ಪಾಸಾದ್ದರಿಂದ ರಾಷ್ಟ್ರಪತಿ
ಡಾ. ಕೇಸರ್ಕರು ಅಮೇರಿಕೆಯ ಅಂತರಿಕ್ಷ ಹಾರುವ ವೇಗದ ಹಾಗೂ ನಿಯಂತ್ರಣದಲ್ಲಿ ರಿಸರ್ಚ ನೌಕರಿ ಪ್ರಾರಂಭಿಸಿದರು. ನಂತರ 1980ರಲ್ಲಿ ಬೋಯಿಂಗ್ ಕಂಪನಿಯಲ್ಲಿ ನೌಕರಿ ಸೇರಿದರು. ಅವರು ಇಂಜನಿಯರಿಂಗ್ ಮಾರ್ಕೆಟಿಂಗ್ದ ಸೇಲ್ಸ್ ವಿಭಾಗದಲ್ಲಿ ಅಧಿಕಾರಿಯಾದರು. ಪ್ರಾರಂಭದ ಆರು ವರ್ಷಗಳಲ್ಲಿ ಅವರು 737, 747, 757 ಹಾಗೂ 767 ಮಾಡೆಲ್ನ ಹಾರಾಟದ ಸಂಬಂಧದ ತಂತ್ರಜ್ಞಾನದಲ್ಲಿ ಸಂಶೋಧನೆ ಮಾಡಿದರು.
1987 ರಿಂದ ಅವರು ಭಾರತದಲ್ಲಿ ಬೋಯಿಂಗ್ ವಿಮಾನ ಗಳ ವಿಕ್ರಯ ಹಾಗೂ ಮಾರ್ಕೆಟಿಂಗ್ ವ್ಯವಸ್ಥೆಯನ್ನು ಚೆನ್ನಾಗಿ ನೋಡಿಕೊಂಡರು. ನಂತರ ಮೂರು ವರ್ಷಗಳವರೆಗೆ ಬೋಯಿಂಗ್ ಇಂಡಿಯಾದ ಅಧ್ಯಕ್ಷರಾದರು. ಡಾ. ವಿದೇಶ ಪ್ರವಾಸವಲ್ಲದೆ ತನ್ನ ದೇಶದ ಮಣ್ಣು ಹಾಗೂ ಪರಂಪರೆಗೆ ಹೊಂದಿಕೊಂಡಿದ್ದರು. ಪಾಶ್ಚಿಮಾತ್ಯ ಸಂಗೀತವಲ್ಲದೆ ಬಿಡುವಿನ
ಸಮಯದಲ್ಲಿ ಶಾಸ್ತ್ರೀಯ ಸಂಗೀತ ಕೇಳಲು ಬಯಸುತ್ತಾರೆ. ಮನೆಯಲ್ಲಿ ಮರಾಠಿ ಮಾತನಾಡುವರು, ಹಿಂದಿಯನ್ನು ಮಾತನಾಡುವರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ