ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 18 ನೇ ದಿನ
ಭಾರತದ ಮಹಾನ್ ವಿಜ್ಞಾನಿಗಳು
ಡಾ. ಡಿ. ಎನ್. ವಾಡಿಯಾ
ವಿಶ್ವದಲ್ಲಿ ಭೂಗರ್ಭ ವಿಜ್ಞಾನದ ಅಧ್ಯಯನ ಹದಿನಾರನೇ ಶತಮಾನದಿಂದ ಪ್ರಾರಂಭವಾಗುತ್ತದೆ. ಸನ್ 1951 ರಲ್ಲಿ ಭೂ ಸರ್ವೆಕ್ಷಣವು ಭಾರತದಲ್ಲಿ ಪ್ರಾರಂಭವಾಯಿತು. ಬ್ರಿಟಿಶ್ ಸರಕಾರವು ಭಾರತೀಯ ಭೂ-ತಾತ್ವಿಕ ಸರ್ವೇಕ್ಷಣ ವಿಭಾಗದ ಸ್ಥಾಪನೆ ಮಾಡಿದ್ದರಿಂದಲೇ ಸಾಧ್ಯವಾಯಿತು. ಅದರ ಕಾರ್ಯಕರ್ತ ಬ್ರಿಟಿಷ್ ವಿಜ್ಞಾನಿಯೇ ಆಗಿದ್ದನು. ಆದರೆ ಡಿ.ಎನ್. ವಾಡಿಯಾ ಅವರು ಈ ಸರ್ವೇಕ್ಷಣವನ್ನು ದೇಶದ ವಿಜ್ಞಾನಿಗಳಿಂದಲೇ ಮಾಡಿಸಬೇಕೆಂಬ ಮಹತ್ವಪೂರ್ಣ ಕಾರ್ಯವನ್ನು ಪ್ರಾರಂಭಿಸಿದರು. ಇದು ದೇಶದ ಆರ್ಥಿಕ ಹಾಗೂ ಔದ್ಯೋಗಿಕ ವಿಕಾಸಕ್ಕಾಗಿ ಅತ್ಯಂತ ಮಹತ್ವಪೂರ್ಣ ದೊಂದು ಸಿದ್ಧವಾಯಿತು.
ಡಾ.ದಾರಾಶ ನೌಶೇರವಾ ವಾಡಿಯಾರ ಜನನ ಗುಜರಾತದ ಸೂರತ ನಗರದಲ್ಲಿ 24 ಅಕ್ಟೋಬರ್ 1883 ರಲ್ಲಾಯಿತು. ಅವರ ಪ್ರಾರಂಭಿಕ ಶಿಕ್ಷಣವು ಸೂರತದಲ್ಲೇ ಆಯಿತು. ಬಡೋದಾ ಕಾಲೇಜಿನಿಂದ ಅವರು ಜೀವವಿಜ್ಞಾನ ಹಾಗೂ ಭೂ-ವಿಜ್ಞಾನದಲ್ಲಿ ಎಂ.ಎಸ್ಸಿ. ಮಾಡಿಕೊಂಡರು. 23 ವರ್ಷದವರಾದಾಗ ಅವರು 1907 ರಲ್ಲಿ ಪ್ರಾಧ್ಯಾಪಕರಾಗಿ ಪ್ರಿನ್ಸ್ ಆಫ್ ವೇಲ್ಸ್ ಕಾಲೇಜ, ಜಮ್ಮುಕ್ಕೆ ಹೋದರು. ಇಲ್ಲಿಂದಲೇ ವಾಡಿಯಾ ಅವರ ಭೂಗರ್ಭ ವಿಜ್ಞಾನದ ಸಂಶೋಧನೆಯ ಕಾರ್ಯ ಪ್ರಾರಂಭವಾಯಿತು.
ಡಾ. ವಾಡಿಯಾ ಜಮ್ಮುವಿನಲ್ಲಿ ಸುತ್ತುವರಿದ ಪರ್ವತ ಶ್ರೇಣಿಗಳಲ್ಲಿ ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದರು. ಅವರು ಹಿಮಾಲಯದ ತಳಹದಿಯಿಂದ ತಮ್ಮ ಸಂಶೋಧನಕ್ಕೆಂದು ಖನಿಜ, ಗುಡ್ಡ, ಜೀವಾತ್ಮ ಮತ್ತು ವನಸ್ಪತಿಗಳನ್ನು ಆಯ್ಕೆ ಮಾಡಿದರು. ಮತ್ತು ಹಿಮಾಲಯದ ಭೂವಿಜ್ಞಾನದ ಅಧ್ಯಯನ ಪ್ರಾರಂಭಿಸಿದರು. ಅದೇ ಕಾಲಕ್ಕೆ ಅವರು ವಿದ್ಯಾರ್ಥಿಗಳಿಗಾಗಿ ಭೂಗರ್ಭ ವಿಜ್ಞಾನವೆಂಬ ಪುಸ್ತಕವನ್ನು ಬರೆದರು. ಅದರಲ್ಲಿ ಅವರು ವಿಶ್ವಪ್ರಸಿದ್ಧರಾದರು. ಅವರು ಪರ್ವತಗಳ ದಿನ್ನೆಗಳ ಮಾಟ, ಅವು ಬೆಳೆಯುತ್ತಿರುವ ರೀತಿಯನ್ನು ಹಾಗೂ ಪೂರ್ವಿ ಹಿಮಾಲಯದಲ್ಲಿ ಕಾಣುವ ಆಂಕಡೊಂಕಾದ ತಿರುವುಗಳ ಬಗೆಗೂ ತಿಳಿಸಿದರು. ಆಸ್ಸಾಮದಿಂದ ಕಾಶ್ಮೀರದವರೆಗೆ ಹಿಮಾಲಯದ ಅನೇಕ ವಿಶಾಲ ಪರ್ವತ ಶ್ರೇಣಿಗಳಲ್ಲಿ ಹರಡಿದ. ಆಸ್ಥಾಮದಿಂದ ದಕ್ಷಿಣದಲ್ಲಿ ಬರ್ಮಾದತ್ತ ಅಡ್ಡ-ತಿಡ್ಡ ತಿರುವುಗಳಿಂದ ತಿರುಗಿದೆ, ಆದರೆ ಅನ್ಯ ಭೂ-ವಿದ್ಯಮಾನಗಳನ್ನು ಅರಿತವರು ಹೇಳುವಂತೆ ಕಾಶ್ಮೀರದಲ್ಲಿ ಹಜಾರಾದ ಸಮೀಪ ತಿರುವು ಎರಡು ಪ್ರತ್ಯೇಕ ಶ್ರೇಣಿಗಳನ್ನು ನಿರ್ಮಿಸಿದೆ ಹಾಗೂ ಹಿಂದುಕುಶ ಪರ್ವತವು ಹಿಮಾಲಯದ ಭಾಗದಲ್ಲಿದೆ ಎಂದಿದ್ದಾರೆ. ಆದರೆ ಡಾ. ವಾಡಿಯಾ
36
ಇದನ್ನು ಒಪ್ಪಲಾರದು. ಅವರು ತಮ್ಮ ಅಧ್ಯಯನ ಹಾಗೂ ಸಂಶೋಧನೆಯಿಂದ ಈ ತೀವ್ರ ತಿರುವು ಒಂದೇ ಪರ್ವತದ್ದೆ, ಅದು ಹಿಮಾಲಯ ಶ್ರೇಣಿಯಿಂದಲೇ ನಿರ್ಮಿತವಾಗಿದೆ. ಅವರು ಹಿಂದುಕುಶ ಪರ್ವತ ಮಾಲೆಗಳಲ್ಲಿ ಅಡ್ಡಾಡಿ ಓಡಾಡಿ ಅದರ ಮಾಟ ಹಾಗೂ ಪರ್ವತಗಳ ಆಳವಾದ ಅಧ್ಯಯನ ಮಾಡಿದರು. ಅದರ ಪ್ರಕಾರ ಎರಡೂ ಪರ್ವತ ಶ್ರೇಣಿಗಳ ಗುಡ್ಡಗಳಲ್ಲಿ ಸಮಾನತೆ ಇದೆ. ಇದೇ ಸಂಶೋಧನೆಯಲ್ಲಿ ಲಂಡನ್ದ ರಾಯಲ್ ಜಿಯೋಲಾಜಿಕಲ್ ಸೊಸಾಯಿಟಿಯು ಅವರಿಗೆ 'ಲೀಲಪದಕ'ದಿಂದ ಸನ್ಮಾನಿಸಿತು. ಜೋಯಾಮೆರ ಗುಡ್ಡ , ಗಂಗಾ ಪರ್ವತ ಮತ್ತು ಶ್ರೀಲಂಕಾದ ಭೂ-ವಿಜ್ಞಾನದ ಅಧ್ಯಯನವನ್ನು ಮಾಡಿದರು. ಅದರಿಂದ ಮಾಡಲ್ಪಟ್ಟ ಈ ಸಂಶೋಧನೆಯು ಅತ್ಯಂತ ಕಠಿಣ ಕಾರ್ಯವಿದ್ದಿತು. ಇದಲ್ಲದೇ ಡಾ. ವಾಡಿಯಾ ಭಾರತೀಯ ನಾಣ್ಯಗಳ ಅಧ್ಯಯನ ಮಾಡಿದರು. ಅವರು ಮಧ್ಯ ಏಶಿಯಾದ ಮರುಭೂಮಿ ಸಂಬಂಧದಲ್ಲೂ ಮಹತ್ವಪೂರ್ಣ ಕಾರ್ಯ ಮಾಡಿದರು,
1916ರಲ್ಲಿ ಅವರ 'ದಿ ಜಿಯಾಲಜಿ ಆಫ್ ಇಂಡಿಯಾ ಅಂಡ್ ಬರ್ಮಾ ಎಂಬ ಪುಸ್ತಕ ಪ್ರಕಾಶನವಾಯಿತು. ಈ ಪುಸ್ತಕ ಅವರು ವಿದ್ಯಾರ್ಥಿಗಳಿಗೆ ಭೂ-ವಿಜ್ಞಾನದತ್ತ ಆಕರ್ಷಿತರಾಗಲು ಬರೆದರು. ಅವರು ಬರೆದ 'ಸ್ಪೆಕ್ಟರ್ ಆಫ್ ಹಿಮಾಲಯ' ಎಂಬ ಪುಸ್ತಕವೂ ಪ್ರಸಿದ್ಧವಾಗಿದೆ.
ನಮ್ಮ ದೇಶ ಖನಿಜ ತತ್ವಗಳಿಂದ ತುಂಬಿದೆ, ಆದರೆ ಅದನ್ನು ಶೋಧಿಸುವ ಅವಶ್ಯಕತೆ ಇದೆ ಎನ್ನುತ್ತಾರೆ ಡಾ. ವಾಡಿಯಾ, ಭೂವಿಜ್ಞಾನ ಕ್ಷೇತ್ರದಲ್ಲಿ ತಮ್ಮ ವಿಶೇಷ ಕೊಡುಗೆಗಾಗಿ ಅವರನ್ನು ಬೇಕ್ ಅವಾರ್ಡ್ ಹಾಗೂ ಮೇಘನಾದ ಸಾಹಾ ಪುರಸ್ಕಾರಗಳಿಂದ ಸನ್ಮಾನಿಸಲಾಯಿತು,
1957 ರಲ್ಲಿ ಡಾ. ವಾಡಿಯಾ ರಾಯಲ್ ಸೊಸಾಯಿಟಿಯ ಸದಸ್ಯ ರಾದರು. ಈ ಸನ್ಮಾನ ಪಡೆದ ಭೂಗರ್ಭ ವಿಜ್ಞಾನಿಗಳಲ್ಲಿ ಇವರೇ ಮೊದಲಿಗರು. ಏಷಿಯಾಟಿಕ್ ಸೊಸಾಯಿಟಿಯು ಡಾ. ವಾಡಿಯಾರಿಗೆ ಪಿ.ಎನ್ ಬೋಸ್ ಪದಕ ನೀಡಿತು. ಭಾರತ ಸರ್ಕಾರವು ಡಾ. ವಾಡಿಯಾರಿಗೆ ಅವರ ವಿಶಿಷ್ಟ ಸೇವೆಗೆ 'ಪದ್ದಭೂಷಣ' ಉಪಾಧಿಯಿಂದ ಸನ್ಮಾನಿಸಿತು.
ಇಂತಹ ಮಹಾನ್ ವಿಜ್ಞಾನಿಯು 15 ಜೂನ್ 1960 ರಲ್ಲಿ ನಿಧನರಾದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ