ಬುಧವಾರ, ನವೆಂಬರ್ 25, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ- 20 ನೇ ದಿನ- ಡಾ.ದೌಲತ್ ಸಿಂಹ ಕೋಠಾರಿ ರವರ ಪರಿಚಯ.

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 20 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು

 ಡಾ. ದೌಲತಸಿಂಹ ಕೊಠಾರಿ


ಡಾ, ದೌಲತಸಿಂಹ ಕೊಠಾರಿಯವರು ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಗಳ ಅದ್ಭುತ ಸಮನ್ವಯವನ್ನು ಪ್ರಸ್ತಾಪಿಸಿದರು. ಆಧುನಿಕ ವಿಜ್ಞಾನ ಮತ್ತು ಆಧ್ಯಾತ್ಮದ ಸಮನ್ವಯಗೊಳಿಸಿ ಹೊಸ ವಿಜ್ಞಾನವನ್ನು ಸಮಗ್ರಗೊಳಿಸಬಹುದೆಂಬ ವಿಚಾರದಲ್ಲಿದ್ದರು. ಸಾಪೇಕ್ಷವಾದ ಹಾಗೂ ಕ್ವಾಂಟಮ್ ಸಿದ್ಧಾಂತದ ಮೂಲವು ಭಾರತೀಯ ಆಧ್ಯಾತ್ಮ ವಾದದಲ್ಲಿದೆ ಎಂಬ ವಿಶ್ವಾಸವಿದ್ದಿತು.


ಕೋಠಾರಿಯವರ ಜನ್ಮ ಉದಯಪುರದಲ್ಲಿ 6 ಜುಲೈ 1906 ರಂದು ಆಯಿತು. ಅವರ ಪ್ರಾಥಮಿಕ ಶಿಕ್ಷಣವು ಉದಯಪುರ ಮತ್ತು ಇಂದೋರ್ ದಲ್ಲಾಯಿತು. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಇಂದೂರಿನಲ್ಲೇ ಪ್ರಥಮ ಸ್ಥಾನದಲ್ಲಿ ಪಾಸಾದರು. ಮಹಾವಿದ್ಯಾಲಯದ ಶಿಕ್ಷಣವನ್ನು ಅವರು ಅಲಹಾಬಾದ್ ಹಾಗೂ ಪಡೆದರು. ಪ್ರಸಿದ್ದ ವಿಜ್ಞಾನಿ ಡಾ. ಮೇಘನಾದ ಸಾಹಾರ ಪ್ರೇರಣೆಯಿಂದ ಅವರು ಪಿಎಚ್.ಡಿ.ಗಾಗಿ ಲಂಡನ್ನಿನ ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಸಿದ್ದಿ ಕೈವೋಡಿಕ್ ಪ್ರಯೋಗ ಶಾಲಾಕ್ಕೆ ನಡೆದರು.

ದ್ರವ್ಯಗಳ ಖಂಡಕದ ನಕ್ಷತ್ರಗಳಲ್ಲಿ ರೂಪಾಂತರಗಳ ಉಲ್ಲೇಖನೀಯ ಕೊಡುಗೆಯಾಗಿದೆ.


ಆಯನೀಕರಣ ಸಿದ್ದಾಂತ'ದ ಶೋಧದ ಶ್ರೇಯಸ್ಸು ಡಾ. ಕೋಠಾರಿಯವರಿಗೆ ಸಲ್ಲುತ್ತದೆ. ಅವರು ಈ ಪ್ರಯೋಗ ಶ್ವೇತಬೋಧನೆ ನಕ್ಷತ್ರದ ಚೌಕಟ್ಟು ತಿಳಿಸಿಕೊಡಲು ಉಪಯೋಗಿಸಿದರು. ಇದನ್ನು ಜಗತ್ತಿನ ವಿಜ್ಞಾನಿಗಳು ಅತ್ಯಂತ ಮಹತ್ವಪೂರ್ಣದ್ದೆಂದು ಒಪ್ಪಿದರು.


12 ಜುಲೈ 1948ರಲ್ಲಿ ಡಾ. ಕೋಠಾರಿ ಭಾರತದ ರಕ್ಷಾ ಮಂತ್ರಾಲಯ ದಲ್ಲಿ ಪ್ರಥಮ ವೈಜ್ಞಾನಿಕ ಸಲಹಾಕಾರರೆಂದು ಅಧಿಕಾರ ವಹಿಸಿಕೊಂಡರು.


ಅಲ್ಲಿ ಅವರು 1961ರ ವರೆಗೆ ಕಾರ್ಯ ಮಾಡಿದರು. ಈ ಅವಧಿಯಲ್ಲಿ ಅವರು ಭಾರತದ ಸಮಸ್ತ ಪ್ರತಿರಕ್ಷಾ ವೈಜ್ಞಾನಿಕ ಪುನರ್ಘಟನೆ ಮಾಡಿದರು. ದೇಶದ ರಕ್ಷಾ ಪ್ರಯೋಗಶಾಲೆಯ ಶಿಲಾನ್ಯಾಸ ಮಾಡಿದರು.


ರಕ್ಷಾ ಸಲಹಾಕಾರರಾಗಿ ಶಿಕ್ಷಣದ ಬಗ್ಗೆ ಅವರ ಅಭಿರುಚಿ ಈ ಕಾರಣ ನಿಯಮಿತ ರೂಪದಲ್ಲಿ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಭೌತಿಕ ಶಾಲೆ ಯನ್ನು ನೋಡಿಕೊಳ್ಳುತ್ತಿದ್ದರು. ವೈಜ್ಞಾನಿಕ ಸಲಹಾಕಾರರಾದಾಗ ಅವರು ಅತ್ಯಂತ ಸಂವೇದನಶೀಲರಾಗಿದ್ದರು. ಅವರು ಪರಮಾಣು ಶಕ್ತಿ ವಿಧ್ವ

ವಿಧ್ವಂಸದ.  ವಿಷಯದ ಪುಸ್ತಕ ನ್ಯೂಕ್ಲಿಯರ್ ಎಕ್ಸಪ್ಲೋಬನ ಆಂಡ್ ದೇರ್ ಇಫೆಕ್ಟ್' ಎಂಬ ಪುಸ್ತಕ ಬರೆದರು. ಇದು ಜರ್ಮನ್, ರಶಿಯನ್, ಜಪಾನಿ ಭಾಷೆಗಳಲ್ಲಿ ಅನುವಾದವಾಯಿತು,


ಈ ಪುಸ್ತಕದಲ್ಲಿ ಅವರು ನಕ್ಷತ್ರ ಭೌತಿಕಿ ವಿಷಯದಲ್ಲಿ ನಡೆಸಿದ ಪ್ರಯೋಗಗಳ ಬಗ್ಗೆ ಸಾಕಷ್ಟಿದೆ. ಅವರ ಉಳಿದ ಮುಖ್ಯ ಪುಸ್ತಕ 'ನ್ಯೂಮರಿಸಿ ಪೇಪರ್ಸ್ ಆನ್ ಸೈಟಿಸ್ಟಿಕಲ್ ಥರ್ಮೊಡಾಯನೋಮಿಕ್ಸ್ ಥೇರಿ ಆಫ್ ವೈ ಡ್ರವಾರ್ಫ್ ಸ್ಪಾರ್ಸ್' ಮುಂತಾದವುಗಳು.


1961ರಲ್ಲಿ ಅವರು ವಿಶ್ವವಿದ್ಯಾಲಯ ಅನುಸಂದಾನ ಆಯೋಗದ ಪ್ರಥಮ ಅಧ್ಯಕ್ಷರಾದರು. ಭಾರತ ಸರಕಾರವು 1964 ರಲ್ಲಿ ಶಿಕ್ಷಣ ಆಯೋಗ ಸ್ಥಾಪಿಸಿತು. ಅದರ ಅಧ್ಯಕ್ಷರಾದರು. ಆಳವಾದ ಅಭ್ಯಾಸ ಹಾಗೂ ವಿಶ್ವವಿಸ್ತಾರಿಯ ವಿಚಾರಗಳ ವಿಮರ್ಶಯ ನಂತರ ಅವರು ತಮ್ಮ ಒಂದೂವರೆ ಸಾವಿರ ಪುಟಗಳ ಒಂದು ವರದಿ ಸಿದ್ಧಗೊಳಿಸಿದರು. ಸ್ವತಂತ್ರ ಭಾರತದ ಸಂಪೂರ್ಣ ಶಿಕ್ಷಾ ಪ್ರಕಾಲಿಯ ಮೇಲೆ ಸಿದ್ಧವಾದ ಈ ವರದಿ ಶಿಕ್ಷಣದ ಅನೇಕಾನೇಕ ಸಮಸ್ಯೆಗಳ ಪ್ರತಿ ವ್ಯವಹಾರಿಕ ಹಾಗೂ ಯಥಾರ್ಥವಾದ ದೃಷ್ಟಿಕೋನ ಸಾದರಪಡಿಸುತ್ತದೆ. ದೇಶದಲ್ಲಿ ಪ್ರಾಥಮಿಕ ತಳದಿಂದ ವಿಶ್ವವಿದ್ಯಾಲಯದವರೆಗೆ ಶಿಕ್ಷಣದಲ್ಲಿ ಏಕರೂಪತೆ ಹಾಗೂ ಸಮಂಜಸ ಉತ್ಪನ್ನ ಹಾಗೂ ಎಲ್ಲ ರಾಜ್ಯಗಳಲ್ಲಿ 1023 ಪ್ರಣಾಲಿ ಲಗೂ ಮಾಡುವದೇ ಈ ವರದಿಯ ಕೊಡುಗೆ ಆಗಿದೆ. ಅವರ ಮುಖಾಂತರ ಶಾಲಾ ಶಿಕ್ಷಣ ಪ್ರಣಾಲಿಯನ್ನು ಸಂಪೂರ್ಣ ರೂಪದಿಂದ ಸ್ವೀಕಾರ ಮಾಡಿದ್ದಾಗಿದ್ದರೆ, ಶಿಕ್ಷಣದಲ್ಲಿ ಇಂದು ನಾವು ಬೇರೆ ಸ್ವರೂಪವನ್ನು ಕಾಣಬಹುದಿತ್ತು!


1981 ರಿಂದ 10 ವರ್ಷಗಳವರೆಗೆ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಇದಕ್ಕಿಂತ ಮೊದಲು ಈ ಸ್ಥಾನದಲ್ಲಿ ಕೇವಲ ಭಾರತದ ಪ್ರಧಾನ ಮಂತ್ರಿಗಳೇ ಇದ್ದರು. ಡಾ. ಕೋಠಾರೀ ಪ್ರಕಾರ ಮಾನವ ವಿಕಾಸಕ್ಕಾಗಿ ನಾವು ಅಣುವಿಜ್ಞಾನದೊಂದಿಗೆ ಆತ್ಮಾಜ್ಞಾನದತ್ತಲೂ ಲಕ್ಷಿಸಬೇಕು ಎಂಬುದು ಅವರ ವಿಚಾರವಾಗಿದ್ದಿತು. ಅವರ ವ್ಯಾಖ್ಯಾನದಲ್ಲೇ ಆಧ್ಯಾತ್ಮ ಹಾಗೂ ವಿಜ್ಞಾನದ ಸಮನ್ವಯವು ಒಂದು ಪ್ರಮುಖ ವಿಷಯವಾಗುತ್ತಿತ್ತು. ಅವರ ಪ್ರಕಟಿತ ಲೇಖನಗಳಲ್ಲಿ ಕೆಲವು ಲೇಖನಗಳ ಎಟಮ ಎಂಡ್ ಸೆಲ್ಲ ಎಂಬುದು ಜಗತ್ತೇ ಪ್ರಶಂಸಿಸಿತ್ತು. ವಿಜ್ಞಾನ ಮತ್ತು ಅಹಿಂಸಾ ಒಂದಕ್ಕೊಂದು ಪೂರಕವಿದೆಂಬುದು ಅವರ ವಿಶ್ವಾಸ

ಭಾರತ ಸರಕಾರವು 1962 ರಲ್ಲಿ ಡಾ. ಕೋಠಾರಿಗೆ ಹಾಗೂ 1973 ರಲ್ಲಿ ಪದ್ಮವಿಭೂಷಣದಿಂದ ಅಲಂಕರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಅವರಿಗೆ ಫೆಡರೇಶನ್ ಆಫ್ ಯುನೆಸ್ಕೋ ಯುನೆಸ್ಕೊ ಆವಾರ್ಡ್ ಕೊಟ್ಟು ಸನ್ಮಾನಿಸಿತು.


ಇಂತಹ ಪ್ರಖ್ಯಾತ ವೈಜ್ಞಾನಿಕ ಮತ್ತು ಶಿಕ್ಷಣತಜ್ಞ ಡಾ. ದೌಲತ್‌ಸಿಂಹ ಕೋಠಾರೀ 4 ಫೆಬ್ರುವರಿ 1993ರಂದು ಬೆಳಿಗ್ಗೆ ಹೃದಯಾಘಾತದಿಂದ ಜಯಪುರ ದಲ್ಲಿ ಮರಣ ಹೊಂದಿದರು.





ಕಾಮೆಂಟ್‌ಗಳಿಲ್ಲ:

Newtons first law experiment