ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 3 ನೇ ದಿನ
ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು
3. ನಾಗಾರ್ಜುನ
ನಾಗಾರ್ಜುನರು ಪ್ರಾಚೀನ ಭಾರತದ ರಸಾಯನ ಶಾಸ್ತ್ರದ ಒಬ್ಬ ಪ್ರಖ್ಯಾತ ದ್ವಾಂಸರು. ಅವರ ಜನನ ಸೋಮನಾಥದ ನಿಕಟ ಗುಜರಾತದಲ್ಲಿ ದೈಹಿಕ ಹೆಸರಿನ ಹಿತ್ತಿಯಲ್ಲಾಯಿತು. ಆಗ ಸುಮಾರು ೭-೮ನೇ ಶತಮಾನವಿರಬಹುದೆಂದು ತಿಳಿಯ ಲಾಗುತ್ತದೆ. ಇದೇ ಸಮಯ ಆಯುರ್ವೆದ ಧಾತುವಾದದ್ದಿದೆ.
ನಾಗಾರ್ಜುನರು ಒಬ್ಬ ರಸಾಯನ ಅರ್ಥಾತ್ ಕಿಮಿಯಾಗರ. ನಾಗಾರ್ಜುನರು ಬರೆದ ಗ್ರಂಥ 'ರಸರತ್ನಾಕರ' ಹಾಗೂ 'ರಸೇಂದ್ರಮಂಗಲ'' -ಶೈಧಿಕ ಪ್ರಸಿದ್ಧವಿದೆ, ರಸರತ್ನಾಕರದಲ್ಲಿ ಧಾತುಗಳ ಸಂಶೋಧನೆ ಹಾಗೂ ಅವುಗಳ ಗುಣ-ದೋಷಗಳ ನಿರೂಪಣೆ ಇದೆ. ಅದರಲ್ಲಿ ಪಾರಜದ ಉಲ್ಲೇಖನವೂ ಇದೆ.
ಪಾರಜದ ಪ್ರಯೋಗವು ಅತ್ಯಂತ ಮಹತ್ವಪೂರ್ಣವುಳ್ಳದ್ದು. ಇದರಲ್ಲಿ ರಾಸಾಯನಿಕ ಕ್ರಿಯೆಗಳು ಇಂದಿಗೂ ಆಶ್ಚರ್ಯವನ್ನುಂಟುಮಾಡುತ್ತವೆ. ಉತ್ಪನ್ನ ಮಾಡುವ ಕೊಡಲಾಗಿದೆ. ಗ್ರಂಥದಲ್ಲಿ ಮತ್ತು ಮಟ್ಟದ ಗ್ರಂಥದಲ್ಲಿ ಬಂಗಾರ, ಬೆಳ್ಳಿ, ಟಿನ್ ಮೊದಲಾದ ಧಾತುಗಳನ್ನು ಶುದ್ಧಗೊಳಿಸುವ ರೀತಿಯ ವರ್ಣನೆಯನ್ನು ಕೊಡಲಾಗಿದೆ.
ಪಾರಜದಿಂದ ಸಂಜೀವಿನಿ ಹಾಗೂ ಅನ್ಯ ಪದಾರ್ಥಗಳನ್ನು ಮಾಡಲು ನಾಗಾರ್ಜುನರು ಪಶುಗಳು, ವನಸ್ಪತಿ ಸತ್ವಗಳು, ಆಮ್ಲ ಹಾಗೂ ಖನಿಜಗಳನ್ನು ಉಪಯೋಗಿಸಿಕೊಂಡರು. ಎಷ್ಟೋ ಧಾತುಗಳನ್ನು ತೊಳೆಯಲು ಅವರು ವನಸ್ಪತಿಗಳಿಂದ ನಿರ್ಮಿತ ತೇಜಾಬದ ಉಪಯೋಗದ ಬಗೆಗೆ ಸೂಚನೆ ನೀಡಿದರು.
ಬಹಳಷ್ಟು ವಿಜ್ಞಾನಿಗಳು ನಾಗಾರ್ಜುನರ ಗ್ರಂಥಗಳಿಂದ ರಸಾಯನ ವಿಜ್ಞಾನದ ವಿಶೇಷ ಜ್ಞಾನ ಪಡೆದರು. ನಾರ್ಗಾಜುನರು ತಮ್ಮ ಪುಸ್ತಕದಲ್ಲಿ ಎಷ್ಟೋ ಮಹತ್ವಪೂರ್ಣ ರಸಾಯನಿಕ ಪ್ರಕ್ರಿಯೆಗಳ ವರ್ಣನೆಯನ್ನು ಮಾಡಿದ್ದಾರೆ. ಆಸವನ (ಡಿಸ್ಟಿಲೇಶನ್) (ಸಬ್ಲಿಮೇಶನ್) ದ್ರವಣ (ಲಿಷೇಫಿಕೇಶನ್) ಎಲ್ಲ ಪ್ರತಿಕ್ರಿಯೆಗಳು ಇಂದು ರಸಾಯನ ವಿಜ್ಞಾನದಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ. ಎಷ್ಟೋ ಧಾತು ಗಳಿಂದ ಬಂಗಾರ ಅಥವಾ ಬಂಗಾರದಂತೆ ಹಳದಿ ವರ್ಣತೋರುವ ಧಾತುಗಳನ್ನು ಮಾಡುವ ವಿಧಿಗಳ ವರ್ಣನೆಯನ್ನು ನಾಗಾರ್ಜುನರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಎಲ್ಲ ಸಂಗತಿಗಳಿಂದ ನಾಗಾರ್ಜುನರಿಗೆ ವಿಭಿನ್ನ ವಸ್ತುಗಳ ರಸಾಯನಿಕ ಗುಣ ಹಾಗೂ ಮಹತ್ವದ ಅದ್ಭುತ ಜ್ಞಾನವಿದ್ದಿತೆಂದು ತಿಳಿದು ಬರುತ್ತದೆ.
ಒಂದು ಕಿಮಿಯಾಗರಿ (ರಸಾಯನಣ್ಣ)ಯಿಂದಲೇ ಆಧುನಿಕ ರಸಾಯನ ವಿಜ್ಞಾನದ ಜನ್ಮವಾಯಿತು. ಇದರಿಂದಾಗಿ ಭಾರತದಲ್ಲಿ ನಾಗಾರ್ಜುನರನ್ನು ಧಾತುವಾದದ ಪ್ರವರ್ತಕರೆಂದು ತಿಳಿಯಲಾಗುತ್ತದೆ. ನಾಗಾರ್ಜುನರು ಪಾರಜದ ಭಸ್ಮವನ್ನು ತಯಾರ ಮಾಡುವ ವಿಧಿಯನ್ನು ವರ್ಣಿಸಿದ್ದಾರೆ ವಿಧಿಯಿಂದ ಪ್ರಯೋಗದಿಂದ ಶರೀರವು ದೀರ್ಘಕಾಲದವರೆಗೆ ನಿರೋಗವಾಗಿರುತ್ತದೆ.
ನಾಗಾರ್ಜುನರು 'ಸುಶ್ರುತ ಸಂಹಿತಾ' ಎಂಬ ಪುಸ್ತಕವನ್ನು ಸಂಪಾದನೆ ಮಾಡಿದರು. ಹಾಗೂ 'ಸುಶ್ರುತ ಸಂಹಿತೆ' ಯಲ್ಲಿ ಉತ್ತರ ತಂತ್ರ ಹೆಸರಿನ ಹೊಸ ಅಧ್ಯಾಯವನ್ನು ಜೋಡಿಸಿದರು.ಇದರಲ್ಲಿ ಔಷಧಿಗಳನ್ನು ತಯಾರಿಸುವ ವಿಧಿಯನ್ನು ಹೇಳಲಾಗಿದೆ.
ನಾಗಾರ್ಜುನರು ಆಯುರ್ವೆದ "ಆರೋಗ್ಯ ಮಂಜರಿ ಯೋಗಸಾರ" , ಯೋಗಾಷ್ಟಕ ಮುಂತಾದ ಗ್ರಂಥಗಳನ್ನು ರಚಿಸಿದರು. ಒಬ್ಬ ಅನುಭವೀ ರಸಾಯನ ಶಾಸ್ತಿಯಾದ ಕಾರಣ ಎಷ್ಟೋ ವಿಜ್ಞಾನಿಗಳು ತಮ್ಮ ಶೋಧಗಳಲ್ಲಿ ಅವರ ಜ್ಞಾನದ ಸಹಾಯ ಪಡೆದರು. ಕಿಮಿಯಾಗರಿ-ಪ್ರಾಚೀನ ಕಾಲದಲ್ಲಿ ರಸಾಯನಕ್ಕೆ ಕಿವಿಯಾಗಲಿ ಎಂದೇ ಎನ್ನುತ್ತಿದ್ದರು. ಕಿಮಿಯಾಗರಿಯು ಎಷ್ಟೋ ಹೊಸ ರಸಾಯನಗಳನ್ನು ಶೋಧಿಸಿತು. ಅವರು ಔಷಧ ವಿಜ್ಞಾನದಲ್ಲೂ ಎಷ್ಟೋ ಶೋಧ ಮಾಡಿದರು. ಅವರ ಮಹತ್ವಪೂರ್ಣ ಸಾಧನೆ ಯೆಂದರೆ ಅಮೃತ ಹಾಗೂ ಸಂಜೀವಿನಿ ಪುಡಿಯನ್ನು ತಯಾರಿಸುವದು, ಅದರಿಂದ ಎಲ್ಲ ರೋಗಗಳನ್ನು ದೂರ ಮಾಡುವುದಾಗಿತ್ತು ಹಾಗೂ ಮರಣವನ್ನು ಗೆಲ್ಲವುದಾಗಿತ್ತು.
2 ಕಾಮೆಂಟ್ಗಳು:
Super information sir
Good
ಕಾಮೆಂಟ್ ಪೋಸ್ಟ್ ಮಾಡಿ