ಭಾನುವಾರ, ನವೆಂಬರ್ 8, 2020

ದಿನಕ್ಕೊಂದು ಪ್ರೇರಣೆ-ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 7 ನೇ ದಿನ-ಗಣಕಚಕ್ರ ಚೂಡಾಮಣಿ ಬ್ರಹ್ಮಗುಪ್ತರ ಪರಿಚಯ

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 7 ನೇ ದಿನ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು

7.ಬ್ರಹ್ಮಗುಪ್ತ




ಬ್ರಹ್ಮಗುಪ್ತ ಒಬ್ಬ ಮಹಾ ಗಣಿತಜ್ಞರಿದ್ದರು. ಅವರು ಭಾರತೀಯ ಗಣಿತವನ್ನು ಸರ್ವೋಚ್ಛ ಸ್ಥಾನಕ್ಕೆ ಏರಿಸಿದರು. 12ನೇ ಶತಮಾನದ ಮಹಾನ್ ಗಣಿತಜ್ಞ ಭಾಸ್ಕರಾಚಾರ್ಯರು ಇವರಿಗೆ "ಗಣಕಚಕ್ರ ಚೂಡಾಮಣಿ' ಎಂಬ ಹೆಸರನ್ನಿಟ್ಟರು. ಬ್ರಹ್ಮಗುಪ್ತರು ಉಚ್ಚಗಣಿತದ ಸಂಖ್ಯಾತ್ಮಕ ವಿಶ್ಲೇಷಣ (ನ್ಯೂಮರಿಕಲ್ ಎನಾಲಿಸಿಸ್ ) ಶಾಖೆಯ ಸ್ಥಾಪನೆ ಮಾಡಿದರು.


ಬ್ರಹ್ಮಗುಪ್ತರ ಜನ್ಮ ಭಿನ್ನಾಲಿ (ಇಂದಿನ ಭೀನಮಾಲ ರಾಜಸ್ತಾನ, ಅಂದು ಗುಜರಾತದ ರಾಜಧಾನಿಯಾಗಿದ್ದಿತು.) ದಲ್ಲಾಯಿತು. ಅವರು ಚಾಪವಂಶದ ರಾಜ ವ್ಯಾಘ್ರಮುಖನ ದರಬಾರಿನಲ್ಲಿ ರಾಜ-ಜ್ಯೋತಿಷಿಗಳಾಗಿದ್ದರು.


ಬ್ರಹ್ಮಗುಪ್ತರಿಂದ ಬರೆದ ಸಂಹಿತೆಗಳಲ್ಲಿ ಬ್ರಹಸ್ಪುಟ ಸಿದ್ಧಾಂತ ಹಾಗೂ ಕರುಣ ಖಂಡ, ಖಂಡಾಯಕವು ಅತ್ಯಂತ ಪ್ರಸಿದ್ಧವಾಯಿತು.


ಬ್ರಹ್ಮಗುಪ್ತರ ಮಹತ್ವಪೂರ್ಣ ಕೊಡುಗೆಯೆಂದರೆ- ಶೂನ್ಯದ ಉಪಯೋಗದ ನಿಯಮ. ಅವರ ಪ್ರಕಾರ ಶೂನ್ಯದಲ್ಲಿ ಯಾವುದ ಸಂಖ್ಯೆಯನ್ನು ಕೂಡಿಸಿದರೆ ಅಥವಾ ಕಳೆದರೆ ಈ ಸಂಖ್ಯೆಯಲ್ಲಿ ಯಾವ ಅಂತರವು ಆಗಲಾರದು. ಅವರ ಪ್ರಕಾರ ಶೂನ್ಯವನ್ನು ಯಾವುದೇ ಸಂಖ್ಯೆಯಿಂದ ಗುಣಿಸಿದರೂ ಶೂನ್ಯವೇ ಆಗುತ್ತದೆ. ಯಾವುದೇ ಸಂಖ್ಯೆಯನ್ನು ಶೂನ್ಯದಿಂದ ವಿಭಜನೆ ಮಾಡಿದರೆ ಅದರ ಪರಿಣಾಮ ಅನಂತವಾಗುವದು.


ಬ್ರಹ್ಮಗುಪ್ತರು ಒಂದು ಮಹತ್ವಪೂರ್ಣ ಗ್ರಂಥ ಬೃಹಸ್ಪುಟ ಸಿದ್ದಾಂತ ಬರೆದರು. ಇದರ ಪ್ರಾರಂಭದ ಕೆಲ ಅಧ್ಯಾಯಗಳಲ್ಲಿ ಜೋತಿಷ್ಯ ಹಾಗೂ ನಂತರ ಗಣಿತದ ವಿಷಯದ ಬಗೆಗೆ ಬರೆದಿದ್ದಾರೆ. ಇದರ ಕೆಲವು ಅಧ್ಯಾಯ ಅಂಕಗಣಿತ ಮತ್ತು ಕ್ಷೇತ್ರ ಮಿತಿಗೆ ಸಂಬಂಧಿಸಿದೆ. ಇನ್ನು ಕೆಲ ಅಧ್ಯಾಯಗಳಲ್ಲಿ ಬೀಜಗಣಿತದ ವರ್ಣನೆ ಮಾಡಿದ್ದಾರೆ,


ಬ್ರಷ್ಟಗುಪ್ತರ ಗ್ರಂಥಗಳಲ್ಲಿ ಬೀಜಗಣಿತವೇ ಪ್ರಮುಖವಾಗಿತ್ತು, ಅದರಿಂದ ಬರೆದ ಕರುಣ, ಖಂಡ, ಖಂಡಾಯತವು ಒಂದು ಖಗೋಳ ಗಣನೆಯ ಪುಸ್ತಕವಾಗಿದೆ. ಇದರಲ್ಲಿ ಬೀಜಗಣಿತವನ್ನು ಅತ್ಯಧಿಕವಾಗಿ ಉಪಯೋಗಿಸಲಾಗಿದೆ. 

ಅವರು ಜೋತಿಷ್ಯದ ಪ್ರಶ್ನೆಗೆ ಪರಿಹಾರ ಹೇಳಲು ಬೀಜಗಣಿತ ಉಪಯೋಗಿಸಿದರು. ಬ್ರಹ್ಮಗುಪ್ತರು ಬಿಡಿಸಲಾರದ ಪ್ರಶ್ನೆಗೆ ಸರಳ ಪರಿಹಾರ ಹೇಳುತ್ತಾರೆ, ಮತ್ತು ವರ್ಗಿಕರಣದ ವರ್ಣನೆ ಯನ್ನು ಪ್ರಥಮವಾಗಿ ಅವರೇ ಮಾಡಿದರು. ಇದಲ್ಲದೆ ತ್ರಿಕೋನಮಿತಿಯ ವಿಷಯದಲ್ಲಿ 'ಬ್ರಹ್ಮಗುಪ್ತರು 'ಜ್ಯಾ'ದ ಪ್ರಯೋಗ ಮಾಡಿದರು. ಅವರು ಒಂದು ಸರಳ ಸಮೀಕರಣ ವನ್ನು EX+30 ದಲ್ಲದ AX+BY+C=0 ಮೊದಲಾದವುಗಳನ್ನು ಬಿಡಿಸುವದರ ರೀತಿಯಲ್ಲಿ ಹೇಳಿದ್ದಾರೆ. ಅನಿವಾರ್ಯ ಸಮೀಕರಣವನ್ನು ಭಾರತೀಯ ಭಾಷೆಯಲ್ಲಿ ವರ್ಗಪ್ರಕೃತಿ ಎನ್ನಲಾಗಿದೆ. ಪಾಶ್ಚಾತ್ಯ ಗಣಿತದ ಇತಿಹಾಸದಲ್ಲಿ ಇದು 'ಪೆಲ ಸಮೀಕರಣ' ಎಂಬ ಹೆಸರಿನಿಂದ ತಿಳಿಯಲ್ಪಡುವದು,


ಬ್ರಹ್ಮಗುಪ್ತ ಒಬ್ಬ ಪರಂಪರೆಯ ದೃಷ್ಟಿಕೋನದವರಿದ್ದರು. ಪೂಜಾರಿ, ಪುರೋಹಿತ ಮುಂತಾದ ಧಾರ್ಮಿಕ ವಿಚಾರವಾದಿ ವ್ಯಕ್ತಿಗಳು ಅವರ ವಿಚಾರದಲ್ಲಿ ಕ್ರೋಧಿತರಾಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳುತ್ತಿದ್ದರು.

ಆಂಗ್ಲ ವಿದ್ವಾಂಸ ಕೋಲಬುಕನು ಬ್ರಹ್ಮಗುಪ್ತನ ಗ್ರಂಥ ಬೀಜಗಣಿತವನ್ನು ಆಂಗ್ಲಭಾಷೆಗೆ ಅನುವಾದಿಸಿದನು.





3 ಕಾಮೆಂಟ್‌ಗಳು:

swetha tambrahalli ಹೇಳಿದರು...

Nice information

Amarakosha ಹೇಳಿದರು...

Tq

R Y Manuvacharya ಹೇಳಿದರು...

ತುಂಬಾ ಉಪಯುಕ್ತ ಮಾಹಿತಿ ಸರ್, ನಿಮಗೆ ಧನ್ಯವಾದಗಳು

Newtons first law experiment