ಸೋಮವಾರ, ನವೆಂಬರ್ 2, 2020

ದಿನಕ್ಕೊಂದು ಪ್ರೇರಣೆ-2 ನೇ ದಿನ


ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು

2.ಚರಕ

ಆಯುರ್ವೇದ ಚಿಕಿತ್ಸಾ ಶಾಸ್ತ್ರದಲ್ಲಿ ಚರಕನ ಹೆಸರು ವಿಶ್ವ ಪ್ರಸಿದ್ಧವಿದೆ. 'ಚರಕ'ದ ಅರ್ಥ 'ನಡೆಯುವದು', ಚರಕ ದೂರ ದೂರದವರೆಗೆ ಪ್ರವಾಸ ಮಾ ಜನರಿಗೆ ಶಿಕ್ಷಣ ಕೊಡುತ್ತಿದ್ದರು. ಅಂತೆಯೇ ಅವರ ಹೆಸರು ಚರಕ ಎಂದಾಯಿತು.


ಚರಕರಿಂದ ಬರೆದ 'ಚರಕ ಸಂಹಿತಾ'' ಆಯುರ್ವೇದದ ಎಲ್ಲಕ್ಕೂ ಪ್ರಾಚೀನ ಹಾಗೂ ಪ್ರಮಾಣಿತ ಆರ್ಷ ಗ್ರಂಥದಲ್ಲಿ ಒಂದಾಗಿದೆ. ಇಂದು ಉಪಲಬ್ಬ ವಿರುವ ಆಯುರ್ವೇದ ಸಂಹಿತೆಗಳಲ್ಲಿ ಚರಕ ಸಂಹಿತಾ ಸರ್ವಶ್ರೇಷ್ಠ ಗ್ರಂಥವಾಗಿದೆ. ಇದರಲ್ಲಿ ಚಿಕಿತ್ಸಾ ವಿಜ್ಞಾನದ ಮೌಲಿಕ ತತ್ವಗಳ ಅತ್ಯಂತ ಉತ್ತಮ ವಿವೇಚನವಿದೆ. ಅಂತೆಯೇ ಪ್ರಾಚೀನ ವಿದ್ವಾಂಸರು 'ಚರಕನ್ನು ಚಿಕಿತ್ಸತೇ' ಎಂದಿದ್ದಾರೆ. ಚರಕ ಸಂಹಿತೆಯಲ್ಲಿ ರೋಗಗಳ ಲಕ್ಷಣಗಳು ಹಾಗೂ ಅವುಗಳ ಚಿಕಿತ್ಸೆಯ ವರ್ಣನೆಯಿದೆ. ತನ್ನ ಗ್ರಂಥದಲ್ಲಿ ಚರಕನು ಆಯುರ್ವೇದವನ್ನು 8 ಖಂಡಗಳಲ್ಲಿ ವರ್ಗಿಕರಿಸಿದ್ದಾನೆ


ಪ್ರಥಮ ಖಂಡ - ಸೂತ್ರ ಸ್ಥಾನದಲ್ಲಿ ಔಷಧ ವಿಜ್ಞಾನ, ಆಹಾರ, ಶಾರೀರಿಕ ಮಾನಸಿಕ ರೋಗಿಗಳ ಚಿಕಿತ್ಸೆಯನ್ನು ಉಲ್ಲೇಖಿಸಿದ್ದಾನೆ.


ದ್ವಿತೀಯ ಖಂಡ - 'ನಿದಾನ ಸಾನ' ದಲ್ಲಿ ಪ್ರಮುಖ ರೋಗಗಳ ಕಾರನ್ನು ವರ್ಣಿಸಿದ್ದಾನೆ.


ತೃತೀಯ ಖಂಡ -'ವಿಧಾನ ಸ್ಥಾನದಲ್ಲಿ ಶಾರೀರಿಕ ಶರೀರವರ್ಧಕ ಊಟದ ಬಗ್ಗೆ ಬರೆದಿದ್ದಾನೆ.


ಚತುರ್ಥ ಖಂಡ- 'ಶರೀರಸ್ಥಾನದಲ್ಲಿ ಶಾರೀರಿಕ ರಚನೆಯನ್ನು ವರ್ಣಿಸಿದ್ದಾನೆ. ಪಂಚಮ ಬಂಡ- ಇಂದ್ರಿಯ ಸ್ಥಾನದಲ್ಲಿ ರೋಗಗಳ ಚಿಕಿತ್ಸೆಯನ್ನು ವರ್ಣಿಸಿದ್ದಾನೆ.


ಆರನೇ ಖಂಡ - "ಚಿಕಿತ್ಸಾ ಸ್ಥಾನ" ದಲ್ಲಿ ಕೆಲ ವಿಶೇಷ ರೋಗಿಗಳ ಚಿಕಿತ್ಸಾ ಪದ್ಧತಿಯನ್ನು ವರ್ಣಿಸಿದ್ದಾನೆ.


ಏಳನೆಯ ಖಂಡ - 'ಕಲಸ್ಥಾನ' ದಲ್ಲಿ ವಿಶೇಷ ಉಪಚಾರಗಳ ವರ್ಣನೆ ಇದೆ. ಎಂಟನೆಯ ಖಂಡ . 'ಸಿದ್ಧಿಸ್ಥಾನ' ದಲ್ಲಿ ವಿಶೇಷ ಉಪಚಾರಗಳನ್ನು ವರ್ಣಿಸಿದ್ದಾನೆ.


ಚಿಕಿತ್ಸಕನಿಗೆ ಸರ್ವ ಪ್ರಥಮ ರೋಗಗಳ ಕಾರಣಗಳ ಶೋಧ ಮಾಡುವ ದಾಗಿದೆ ಎಂದು ಚರಕ ಹೇಳುತ್ತಾನೆ. ನಂತರವೇ ಅದರ ಉಪಚಾರ ಮಾಡುವದು.


ಚರಕನು ಪಾಚನ, ಉಪಾಪಚಯ, ಶರೀರ ಪ್ರತಿರಕ್ಷಾ ಮೊದಲಾದ ವಿಷಯಗಳ ತಿಳಿವಳಿಕೆಯುಳ್ಳ ಪ್ರಥಮ ಚಿಕಿತ್ಸಕನಾಗಿದ್ದನು.


ಒತ್ತ, ಕಫಗಳ ರಕ್ತ ಮಾರಿಸ ಮತ್ತು ಮಜ್ಞಾ, ಧಾತುಗಳು ಉಂಡ ಭೋಜನದ ಮೇಲೆ ಪ್ರತಿಕ್ರಿಯೆ ತೋರಿಸುವವೆಂಬುದು ಚರಕನ ಅಭಿಪ್ರಾಯ. ಮಾನವ ಶರೀರದಲ್ಲಿ ಇದ್ದ ದೋಷಗಳು ಅಸಂತುಲಿತವಾದರೆ ಆಗಲೇ ರೋಗಗಳ ಉತ್ಪತ್ತಿಯಾಗುತ್ತದೆ. ಈ ಸಂತುಲತೆಯನ್ನು ಸ್ಥಿರಗೊಳಿಸಲು ಅವನು ಕೆಲ ಔಷಧಗಳನ್ನು ಕೊಡುತ್ತಿದ್ದನು.


ಮನುಷ್ಯನ ಶರೀರದ ರಚನೆ ಹಾಗೂ ವಿಭಿನ್ನ ಅಂಗಗಳ ರಚನೆಯ ಬಗೆಗೂ ಚರಕನು ಅಭ್ಯಾಸ ಮಾಡಿದನು.


ಚರಕನು ಹೃದಯವನ್ನು ಶರೀರದ ನಿಯಂತ್ರಣ ಕೇಂದ್ರವೆಂದು ತೋರಿಸಿದನು. ಅದು ಇಡೀ ಶರೀರದ ವಿಭಿನ್ನ ಧಮನಿಗಳೊಂದಿಗೆ ಸಂಪರ್ಕಿಸುವದು. ಈ ಧಮನಿಗಳು ರಕ್ತನಾಳಗಳಿಗೆ ಆಹಾರ ಪೂರೈಸುತ್ತವೆ. ವ್ಯರ್ಥ ಪದಾರ್ಥಗಳನ್ನು ಹೊರಗೆ ಒಯ್ಯುತ್ತದೆ. ಯಾವದೇ ಮುಖ್ಯ ನಲ್ಲಿಯಲ್ಲಿ ಉತ್ಪನ್ನ ಅವರೋಧದಿಂದ ಆ ಅಂಗದಲ್ಲಿ ವಿಕಾರ ಉಂಟಾಗುತ್ತದೆ. ಚರಕನ ಎಲ್ಲ ಚಿಕಿತ್ಸಾ ವಿಜ್ಞಾನದ ಒಂದು ಮಹತ್ವಪೂರ್ಣ ಭಾಗವಿದೆ. ಅಂತಯೇ ಆಯುರ್ವೇದದ ಆರ್ಷಗ್ರಂಥ ಇಂದಿಗೂ ಅಷ್ಟೇ ಪ್ರಮಾಣಿತ ವಿದೆ. ಅದು ಪ್ರಾಚೀನ ಕಾಲದಲ್ಲಿದ್ದಷ್ಟು ನಮ್ಮ ಆಯುರ್ವೇದಗಳ ಮಾನ್ಯತೆಗಳು, ಸಿದ್ದಾಂತಗಳು, ಹಾಗೂ ಇದರಲ್ಲಿ ವರ್ಣಿತ ಅನೇಕ ಔಷಧಿ ಗುಣಗಳು ಇಂದಿಗೂ ಆಯುರ್ವಿಜ್ಞಾನವೂ ಸ್ವೀಕಾರ ಮಾಡುತ್ತದೆ. ಆಯುರ್ವೇದಿಕ ಔಷಧಿಗಳ ಮೇಲೆ ವಿದೇಶಗಳಲ್ಲಿ ಅನೇಕ ಸಂಶೋಧನೆಗಳಾಗತೊಡಗಿವೆ.


Newtons first law experiment