ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 10 ನೇ ದಿನ
ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು
10. ಸವಾಯಿ ಜಯಸಿಂಹ (ದ್ವಿತೀಯ).
ಸವಾಯಿ ಜಯಸಿಂಹರ ಜನನ 3 ನವಂಬರ್ 1688 ರಲ್ಲಿ ಆಯಿತು, ಬಾಲ್ಯದಲ್ಲಿ ಅವರಿಗೆ ಆಮೇರ ರಾಜ್ಯ ದೊರೆಯಿತು, ಜಯಸಿಂಹನು ಮೊಗಲ ಸಾಮ್ರಾಟನ ಕೃಪೆಗೆ ಪಾತ್ರವಾದನು, ಮೊಗಲ ಸಾಮ್ರಾಟನು ಪ್ರಸನ್ನನಾಗಿ ಅವನಿಗೆ ಸವಾಯಿ ಬಿರುದಿನೊಂದಿಗೆ ಸನ್ಮಾನಿಸಿದನು.
ಸನ್ 1727 ರಲ್ಲಿ ರಾಜಾ ಜಯಸಿಂಹನು ಒಂದು ಹೊಸ ರಾಜಧಾನಿ ನಿರ್ಮಿಸಿದನು. ಅವನು ಅದಕ್ಕೆ 'ಜಯಪುರ' ಎಂದು ಹೆಸರಿಟ್ಟನು, ಜಯಪುರವು ವಾಸ್ತು ಕಲೆ ಹಾಗೂ ಕಟ್ಟಡಗಳಿಂದ ಅದ್ವಿತೀಯವಾಗಿದೆ.
ಜ್ಯೋತಿಷ್ಯದ ಭಾರತೀಯ ಪರಂಪರೆಯಲ್ಲಿ ಜಯಸಿಂಹ ನು ಹೊಸ ಕೀರ್ತಿಯನ್ನೇ ನಿರ್ಮಿಸಿದನು. ಜೋತಿಷ್ಯವನ್ನು ವಿದೇಶಿ ಪ್ರಭಾವದಿಂದ ಮುಕ್ತಗೊಳಿಸಿ ಪುನಃ ಭಾರತದಲ್ಲಿ ಪ್ರತಿಷ್ಠಾಪಿಸಿದನು, ಮತ್ತು ಜಗತ್ತಿನಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದನು.
ಪ್ರಾರಂಭದಲ್ಲೇ ಅವನು ಜೋತಿಷ್ಯ ವಿಜ್ಞಾನದಲ್ಲಿ ಆಸಕ್ತಿ ವಹಿಸಿದನು. ತಾನು ಸತತ ಅಧ್ಯಯನದಿಂದ ಜ್ಯೋತಿಷ್ಯ ವಿಜ್ಞಾನದ ಸಿದ್ದಾಂತ ಮತ್ತು ನಿಯಮಗಳ ಬಗೆಗೆ ಶೋಧ ಮಾಡಿದನೆಂದು ಸ್ವತಃ 'ಜಯಸಿಂಹನೇ ಬರೆದಿದ್ದಾನೆ. ಅವನ ಪ್ರಚಲಿತ ಜ್ಯೋತಿಷ್ಯ ಗಣಿತದಲ್ಲಿ ಕೆಲ ಕೊರತೆಗಳು ಕಂಡುಬಂದವು. ಅವರು ಯುರೋಪ್ ಮತ್ತು ಮುಸ್ಲಿಂ ಖಗೋಲಗಳ ಗಣಿತದಲ್ಲಿ ಅನೇಕ ಆಶುದ್ದಿಗಳನ್ನು ಕಂಡನು. ಆ ಅಶುದ್ದಿಗಳನ್ನೇ ಅವನು ಸ್ವತಃ ಪರಿಶೋಧಿಸಿ ಶುದ್ಧಗೊಳಿಸಿದನು. ಅವನು ಸ್ವತಃ ಅನೇಕ ನಕ್ಷತ್ರಗಳನ್ನು ಗುರುತಿಸಿದನು. ಜ್ಯೋತಿಷ್ಯದ ಮುಖಾಂತರವೂ ಕಾರ್ಯ ಮಾಡಿದನು.
ಸವಾಯಿ ಜಯಸಿಂಹ (ದ್ವಿತೀಯ)ನು ಎಲ್ಲ ಗಣನೆಗಳನ್ನು 'ಜಿ.ಜಿ. ಮಹಮದ ಶಾಹಿ'ಯ ಹೆಸರಿನಿಂದ ಪ್ರಕಾಶನಗೊಳಿಸಿದನು. ಅವನಿಂದ ಸ್ಥಾಪಿತವಾದ ಕಲ್ಲು ಮತ್ತು ಸುಣ್ಣದಿಂದ ನಿರ್ಮಿತ ವೇದ ಶಾಲೆಯು ಇಂದಿಗೂ ಜಯಪುರ ಮತ್ತು ದಿಲ್ಲಿಯ ದರ್ಶನೀಯ ಸ್ಥಳವೆಂದು ಪರಿಗಣಿಸಲಾಗಿದೆ. ಕಲ್ಲು ಮತ್ತು ಸುಣ್ಣದಿಂದ ನಿರ್ಮಿತ ಜ್ಯೋತಿಷ್ಯ ಯಂತ್ರವು ಜ್ಯೋತಿಷ ವಿಜ್ಞಾನಕ್ಕೆ ಜಯಸಿಂಹನ ವಿಶಿಷ್ಟ ಕೊಡುಗೆಯಾಗಿದೆ.
ಜಂತರ-ಮಂತರ ಸ್ಥಾಪನೆ ದಿಲ್ಲಿಯಲ್ಲಿ 1724 ರಲ್ಲಾಯಿತು. ಜಂತರ ಮಂತರವೆಂದರೆ ಉಪಕರಣ ಮತ್ತು ಸೂತ್ರ. ಈ ಉಪಕರಣಗಳನ್ನು ಮಾಡುವಲ್ಲಿ ರಾಜಾ ಜಯಸಿಂಹನು ಪಂಡಿತ ವಿದ್ಯಾಧರ ಭಟ್ಟಾಚಾರ್ಯರಿಂದಲೂ ಸಲಹೆ ಪಡೆದನು, ರಾಜಾ ಜಯಸಿಂಹನಿಗೆ ಸುಣ್ಣ ಕಲ್ಲುಗಳಿಂದ ನಿರ್ಮಿತ ವಿಶಾಲ ಉಪಕರಣವೇ ಮೆಚ್ಚಿಗೆ ಯಾಗಿತ್ತು. ಯಾರಾದರೂ ಖಗೋಲ ವಿಜ್ಞಾನವನ್ನು ಓದಬೇಕೆಂದರೆ ಅವನು ಈ ವೇದ ಶಾಲೆಗಳಲ್ಲಿ ಬರಬಹುದು ಎಂದು ಅವನು ಹೇಳುತ್ತಿದ್ದನು. ಜಯಸಿಂಹನಿಂದ ನಿರ್ಮಿತ ಉಪಕರಣ ಗಳಲ್ಲಿ ಸಮ್ರಾಟಿಯಂತ್ರ, ರಾಮಯಂತ್ರ ಮತ್ತು ಜಯಪ್ರಕಾಶಗಳು ಪ್ರಮುಖವಾಗಿವೆ.
ಸಮ್ರಾಟ ಯಂತ್ರ - ಅಧಿಕ ಮಹತ್ವಪೂರ್ಣ ವಿಶಾಲ ಸಮಕೋನದ ಶಂಕು, ಒಂದು ಪ್ರಕಾರದ ಬಿಸಿಲು ಗಡಿಯಾರವಿದೆ. ಅದು ಅರ್ಧ ಮಿನಿಟಿನ ಅಂತರದಿಂದ ಸರಿಯಾದ ಸಮಯ ತೋರಿಸುವದು. ಈ ಯಂತ್ರವು ಸೂರ್ಯನ ಎತ್ತರವನ್ನು ಅಳೆಯುವದರಲ್ಲೂ ಸಹಾಯಕವಾಗಿದೆ.
ಜಯಪ್ರಕಾಶ ಯಂತ್ರ - ಈ ಮೌಖಿಕ ಯಂತ್ರವನ್ನು ಶವ ಯಂತ್ರ ಶಿರೋಮಣಿಯಂದು ಸೂಚಿಸಿದ್ದಾರೆ, ಇದು ಹಗಲಿಯ ಬಂಡಿಯ ಸ್ಥಿತಿಯನ್ನು ಆಳುವ ಕಾರ್ಯ ಮಾಡುತ್ತದೆ.
ರಾಮಯಂತ್ರ- ಇದೊಂದು ಉದ್ದನ್ನ ಕಂಬವಾಗಿದೆ.ಇದರ ಹೊರಗೆ ಒಂದು ಸಿಲೆಂಡರ್ ಇದೆ. ಅದರಿಂದ ನಕ್ಷತ್ರಗಳ ದೂರವನ್ನು ಅಳೆಯಲಾಗುತ್ತದೆ,
ಸವಾಯಿ ಜಯಸಿಂಹನ ಕಾಲದಲ್ಲಿ ಆದ ಈ ಗಣನೆಗಳ ಲಾಭವು ಜನ ಸಾಮಾನ್ಯರಿಗೆ ಇಂದು ದೊರೆಯುತ್ತಿದೆ.ಜಯವಿನೋದ ಪಂಚಾಂಗ ಇಂದಿಗೂ ಪ್ರಸಿದ್ಧವಿದೆ. ಪ್ರತಿವರ್ಷ ಮಕರ ಸಂಕ್ರಾಂತಿ ಪರ್ವದಂದು ಇದು ಪ್ರಕಟವಾಗುತ್ತದೆ, ಜಯಸಿಂಹನ ಕಾಲದಲ್ಲಿ ಜ್ಯೋತಿಷ್ಯ ವಿಭಾಗದಲ್ಲಿ ವಿಶೇಷ ರೂಪವಾಗಿ ಪ್ರಗತಿ
"ಸಾಮ್ರಾಟ ಸಿದ್ಧಾಂತ" ದಲ್ಲಿ ಜಯಸಿಂಹನು ಸಮಯ ಕಳೆದಂತೆಲ್ಲ ಗ್ರಹಗಳ ಗತಿಗಳೂ ಬದಲಾಗುತ್ತಿವೆ.ಅದಕ್ಕಾಗಿ ಪ್ರಾಚೀನ ಗಣನೆಗಳನ್ನು ಶುದ್ದವೆಂದು ತಿಳಿಯದೆ ಪ್ರತ್ಯಕ್ಷ ನೋಡಿಯೇ ಗುರುತಿಸಬೇಕೆಂದು ಬರೆದಿದ್ದಾರೆ:
ಜ್ಯೋತಿಷ್ಯ ಕ್ಷೇತ್ರದಲ್ಲಿ ಅವನಿಂದ ನಡೆದ ಕಾರ್ಯಗಳಿಗಾಗಿ ಚಿಮ್ಮ ಡರು. ಇಂಗ್ಲೆಂಡದಲ್ಲಿ ಪೋಪ ಗೋನರಿ ಯಾವ ಕಾರ್ಯ ಮಾಡಿದ್ದಾರೋ ಭಾರತದಲ್ಲಿ ಅದನ್ನೇ ಸವಾಯಿ ಜಯಸಿಂಹರು ಮಾಡಿದ್ದಾರೆಂದು ಹೇಳಿದ್ದಾರೆ. ಜಯಸಿಂಹರಿಂದ ಮಾಡಲಾದ ಗಣನೆಗಳು ವಿಶ್ವಪ್ರಸಿದ್ದವಾದವುಗಳಾಗಿವೆ. ವಿಜ್ಞಾನ ಕ್ಷೇತ್ರದಲ್ಲಿ ಅವರು ಹೊಸ ಆಯಾಮ ಸ್ಥಾಪಿಸಿದರು. ಅವರ ವೇದಶಾಲೆಗಳು ಅವರ ಮಹಾಸ್ವಾರಕಗಳಾಗಿವೆ.
ಜ್ಯೋತಿಷ್ಯ ವಿಜ್ಞಾನಕ್ಕೆ ಹೊಸ ಆಧಾರ ಹಾಗೂ ಆಕಾರ ಕೊಟ್ಟ ಮಹಾನ್ ವಿಜ್ಞಾನಿಯಾದ ಜಯಸಿಂಹರು 1743 ರಲ್ಲಿ ನಿಧನರಾದರು,
1 ಕಾಮೆಂಟ್:
tq mama
ಕಾಮೆಂಟ್ ಪೋಸ್ಟ್ ಮಾಡಿ