ಸೋಮವಾರ, ನವೆಂಬರ್ 9, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ-8ನೇ ದಿನ- ಆರ್ಯಭಟರ ಪರಿಚಯ

 ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 8 ನೇ ದಿನ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು

8. ಆರ್ಯಭಟ.




ಭಾರತದ ಇತಿಹಾಸದಲ್ಲಿ ಆರ್ಯಭಟನು ಒಬ್ಬ ಗಣಿತಜ್ಞ ಹಾಗೂ ಖಗೋಳ ವಿಜ್ಞಾನಿಯ ರೂಪದಲ್ಲಿ ಪ್ರಸಿದ್ಧನಾಗಿದ್ದಾನೆ.


 ಆರ್ಯಭಟ್ಟನನ್ನು ಗುಪ್ತರ ಕಾಲದವನೆಂದು ತಿಳಿಯಲಾಗುತ್ತದೆ. ಅವನ ಜನ್ಮ ಪಾಟ್ನಾದಲ್ಲಿ ಆಯಿತು. ನಾಲಂದಾ ವಿಶ್ವವಿದ್ಯಾಲಯದಲ್ಲಿ ಅವನ ಶಿಕ್ಷಣವಾಯಿತು. ಒಬ್ಬ ಗಣಿತ ತಜ್ಞನಲ್ಲದೆ ಜೋತಿಷಿಯೂ ಆಗಿದ್ದನು. ಜೋತಿಷ್ಠ ಗಣಿತದಲ್ಲಿ ರೇಖಾಗಣಿತ ಹಾಗೂ ಅಂಕಗಣಿತದ ಸಮಾವೇಶ ಮಾಡಿದವರಲ್ಲಿ ಆರ್ಯಭಟ್ಟನೇ ಪ್ರಥಮ ವಿಜ್ಞಾನಿಯು, ಅವನು ಬರೆದ ಪ್ರಸಿದ್ಧ ಪುಸ್ತಕದ ಹೆಸರು- ''ಆರ್ಯಭಟಿಯಂ ವೆಂಬುದಿದ್ದು ಇದರಲ್ಲಿ 121 ಶ್ಲೋಕಗಳಿವೆ. ಅವು ಗೀತಪಾದಿಕಾ, ಗಣಿತಪಾದ, ಕಾಲಕ್ರಿಯಾವಾದ ಹಾಗೂ ಗೋಲಪಾದಗಳೆಂಬ ನಾಲ್ಕು ಖಂಡಗಳಲ್ಲಿ ವಿಭಾಜಿತವಾಗಿವೆ:


 “ಆರ್ಯಭಟೀಯಂ" ಗ್ರಂಥದ ನಾಲ್ಕನೇ ಭಾಗವು ತೀರ ಸಣ್ಣದಿದೆ. ಇದರಲ್ಲಿ ಆರ್ಯಭಟ್ಟನು ಸಂಕ್ಷೇಪದಲ್ಲಿ ಸಂಖ್ಯಾ ಬರೆಯುವ ವಿಚಿತ್ರ ವಿಧಿಯನ್ನು ಪ್ರತಿಪಾದಿಸಿದ್ದಾರೆ.


ಪೃಥ್ವಿ ದುಂಡಗಿದೆ ಎಂಬುದನ್ನು ತಿಳಿಸಿದ ಪ್ರಥಮ ಗಣಿತಜ್ಞನು.


 ಸೃಷ್ಟಿಯು ತನ್ನ ಪರಿಧಿಯಲ್ಲಿ ತಿರುಗುತ್ತದೆ. ಇದೇ ಕಾರಣದಿಂದಾಗಿ ಹಗಲು-ರಾತ್ರಿಗಳಾಗುತ್ತವೆ ಅವರು ಭೂಕೇಂದ್ರಿಯ ಧಾರಣ ತತ್ವದಲ್ಲಿ ವಿಶ್ವಾಸವಿಡುತ್ತಿದ್ದರು. ಪೃಥ್ವಿಯು ಬ್ರಹ್ಮಾಂಡದ ಕೇಂದ್ರವೆಂದು ಅವರು ತಿಳಿದುಕೊಂಡಿದ್ದರು.

ಅವನು ದೇಶದಲ್ಲಿ ಹರಡಿದ ಅಂಧ ವಿಶ್ವಾಸದ ಸಂಪ್ರದಾಯ ವಾದಿಗಳನ್ನು  ವಿರೋಧ ಮಾಡಿದನು.


 ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣಗಳು ಪೃಥ್ವಿ ಹಾಗೂ   ಚಂದ್ರನ ನೆರಳುಗಳಿಂದ  ಆಗುತ್ತವೆ. ಚಂದ್ರನು ಸ್ವತಃ  ಪ್ರಕಾಶಿಸುವುದಿಲ್ಲ.  ಅವನು ಸೂರ್ಯಪ್ರಕಾಶದಿಂದ   ಪ್ರಕಾಶಿತನಾಗುತ್ತಾನೆಂದು ಅವನು ಹೇಳಿದ್ದನು.


ಆರ್ಯಭಟ್ಟನು ಅನಿಯಮಿತ ಸ್ಥಿತಿಯನ್ನು ತಿಳಿದುಕೊಳ್ಳಲು ಅಧಿಚಕ್ರದ ಉಪಯೋಗ ಮಾಡಿದ್ದನು. ಆರ್ಯಭಟೀಯಂ  ಪುಸ್ತಕದಲ್ಲಿ ತ್ರಿಕೋನ ಮಿತಿಯ    ಬಗೆಗೆ ವರ್ಣಿಸಿದ್ದಾನೆ. 


 ಜ್ಯಾ (ಟೇಬಲ್ ಆಫ್ ಸೈನ್) ತಯಾರಿಸಿ ದವರೂ ಸಹ ಗಣಿತಜ್ಞ ಆರ್ಯಭಟ್ಟರೇ ಆಗಿದ್ದರು. ಅವರೇ ಪೈ ಮೌಲ್ಯವನ್ನು 3.14 ಎಂದು ಹೇಳಿದರು. 


ಅವರು ಅನೇಕ ಬಾರಿ ದೊಡ್ಡ ದೊಡ್ಡ ಸಂಖ್ಯೆಗಳನ್ನು ಕವಿತೆಯ ಭಾಷೆಯಲ್ಲಿ ವ್ಯಕ್ತಪಡಿಸಿದ್ದಾರೆ.


ಗಣಿತಶಾಸ್ತ್ರದಲ್ಲಿ ಆರ್ಯಭಟ್ಟರು ಅನೇಕ ಹೊಸ ಸಿದ್ಧಾಂತಗಳನ್ನು ಪ್ರತಿಪಾದಿಸಿದರು. ಬೀಜಗಣಿತದ  ವಿಸ್ತಾರದಿಂದ ಜ್ಞಾನ ಪ್ರಕಟಪಡಿಸಿದವರು ಆಗಿದ್ದರು. ಇದಲ್ಲದೆ ಅವರು ರೇಖಾಗಣಿತ, ವರ್ಗಮೂಲ, ಘನಮೂಲ ಹಾಗೂ ಖಗೋಳಿಯ ಆಕೃತಿಗಳ ಬಗ್ಗೆಯೂ ತಿಳಿಸಿದ್ದಾರೆ.


 ಆರ್ಯಭಟ್ಟರಿಂದ ಬರೆದ ಒಂದು ಪುಸ್ತಕ 'ಆರ್ಯಭಟ್ ಸಿದ್ಧಾಂತ "  ದೈನಿಕ ಖಗೋಳೀಯ ಹಾಗೂ

ವಿಶೇಷ ಪ್ರಯೋಜನಕ್ಕಾಗಿ ಶುಭಮಹೂರ್ತ ಹೇಳುವ ಕಾರ್ಯದಲ್ಲಿ ಉಪಯೋಗವಾಗುತ್ತದೆ. ಇಂದು ಪಂಚಾಂಗ ತಯಾರಿಸಲು ಆರ್ಯಭಟ್ಟರ

ಖಗೋಳಿಯ ಗಣನೆಗಳು  ಅತ್ಯಂತ ಮಹತ್ವಪೂರ್ಣ ಗಳೆಂದು ಸಿದ್ದವಾಗಿದೆ.


 ಖಗೋಳ ಹಾಗೂ ಗಣಿತದಲ್ಲಿ ಆಯಭಟ್ಟನ ವಿಶೇಷ ಕೊಡುಗೆಯ ಕಾರಣ ಭಾರತ ಸರಕಾರವು ತನ್ನ ಪ್ರಥಮ ಬಾಹ್ಯಕಾಶ ಉಪಗ್ರಹ ದ ಹೆಸರನ್ನು 'ಆರ್ಯಭಟ್ಟ'ವೆಂದು ಕರೆದಿತು.

ಕಾಮೆಂಟ್‌ಗಳಿಲ್ಲ:

Newtons first law experiment