ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 9 ನೇ ದಿನ
ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು
9. ಭಾಸ್ಕರಾಚಾರ್ಯ
ಪ್ರಾಚೀನ ಭಾರತದ ಒಬ್ಬ ಮಹಾನ್ ಗಣಿತಜ್ಞ ಭಾಸ್ಕರರನ್ನು ಗಣಿತದ ಸಂಸ್ಥಾಪಕನೆಂದು ಕರೆಯಲಾಗುತ್ತದೆ. ಅವರು ಈ ಸಂಬಂಧ ಐಸಾಕ್ ನ್ಯೂಟನ್ ಹಾಗೂ ಗೋಜ ಫ್ರಾಯಿಡ ಲೋಂಬಿಜರ ಅನೇಕ ಶತಾಬ್ಲಿಯ ಮೊದಲೇ ತಿಳಿದಿದ್ದರು.
ಸನ್ 1114 ರಲ್ಲಿ ಸಹ್ಯಾದ್ರಿ ಪರ್ವತದಲ್ಲಿದ್ದ ಬಿಜಾಪುರ (ಕರ್ನಾಟಕ)ದಲ್ಲಿ ಅವರು ಜನಿಸಿದ್ದರು. ಅವರಿಗೆ ಗಣಿತದ ಜ್ಞಾನವು ಅವರ ತಂದೆಯಿಂದ ಪ್ರಾಪ್ತವಾಯಿತು. ಅವರು ಬ್ರಹ್ಮಗುಪ್ತರಿಂದ ಅತ್ಯಂತ ಪ್ರಭಾವಿತರಾಗಿದ್ದರು. ಅವರ ಪ್ರೇರಣೆಯಿಂದಲೇ ತಮ್ಮ ಇಡೀ ಜೀವನವನ್ನೆಲ್ಲ ಗಣಿತಕ್ಕೆ ಅರ್ಪಿಸಿದರು.
ಭಾಸ್ಕರಾಚಾರ್ಯ ರ ಎರಡು ಮುಖ್ಯ ಗ್ರಂಥ 'ಸೂರ್ಯ ಸಿದ್ಧಾಂತ' ಹಾಗೂ 'ಸಿದ್ಧಾಂತ ಶಿರೋಮಣಿ' (ಲೀಲಾವತಿ) ಅತ್ಯಂತ ಪ್ರಸಿದ್ಧವಾದವುಗಳು. ಲೀಲಾವತಿಯಲ್ಲಿ ಸಿದ್ದಾಂತ ಶಿರೋಮಣಿ ಗ್ರಂಥದ ಮುಖ್ಯ ಖಂಡವಿದೆ. ಅದನ್ನು ಅವರು ತಮ್ಮ ಮಗಳು 'ಲೀಲಾವತಿ'ಗೆ ಸಮರ್ಪಣೆ ಮಾಡಿದ್ದಾರೆ.
ಜೋತಿಷಿಗಳ ಭವಿಷ್ಯವಾಣಿಯ ಅನುಸಾರ ಲೀಲಾವತಿಯ ವಿವಾಹ ಎಂದೂ ಆಗಲಾರದಂತಿತ್ತು. ಆದರೆ ಭಾಸ್ಕರರು ತಮ್ಮ ಗಣನೆಯ ಆಧಾರದಿಂದ ತಮ್ಮ ಮಗಳ ವಿವಾಹಕ್ಕೆ ಒಂದು ಶುಭ ಮಹೂರ್ತ ತೆಗೆದರು.
ಸಮಯ ವೇಳೆ ತಿಳಿಯುವದಕ್ಕಾಗಿ ಅವರು ಒಂದು ಜಲಘಡಿಯಾರ ತಂದರು. ಆ ಗಡಿಯಾರ ಇಟ್ಟ ಸ್ಥಳದಲ್ಲಿ ಯಾರಿಗೂ ಪ್ರವೇಶವಿರಲಿಲ್ಲ. ಆದರೆ ಲೀಲಾವತಿ ತನ್ನ ಕುತೂಹಲವನ್ನು ತಡೆಯಲಿಲ್ಲ. ಅವಳು ಆ ಗಡಿಯಾರದ ಮೇಲೆ ಮುಗ್ನಳಾಗಿ ಅದನ್ನು ನೋಡುತ್ತಲೇ ನಿಂತಳು. ಅದೇ ಕಾಲಕ್ಕೆ ಅವಳ ಮೂಗಿನ ನತ್ತಿನಿಂದ ಒಂದು ಮುತ್ತು ಕಳಚಿ ಆ ಗಡಿಯಾರದಲ್ಲಿ ಬಿದ್ದಿತು. ಅವಳು ಹೆದರಿ ಅಲ್ಲಿಂದ ಓಡಿಹೋದಳು. ಈಗ ಆ ಗಡಿಯಾರದ ರಂಧ್ರಕ್ತಿ ಮುತ್ತು ಸಿಕ್ಕಿ ಅದು ನಡೆಯಲಾರದಾಯಿತು. ಮರುದಿನ ವಿವಾಹದ ಆ ಗಡಿಯಾರ ಹಾಗೂ ಅದರಲ್ಲಿ ಬಿದ್ದ ಮುತ್ತಿನ ಬಗ್ಗೆ ಮರೆತಳು.
ಸಿದ್ಧತೆಯಲ್ಲಿ ಗಡಿಯಾರವು ಸರಿಯಾಗಿ ನಡೆಯದ ಕಾರಣ ಭಾಸ್ಕರನ ಲೆಕ್ಕಾಚಾರದಂತೆ ನಡೆಯದ ಮದುವೆ ಜರುಗಿತು. ಅದರಿಂದಾಗಿ ವಿವಾಹವಾದ ಒಂದು ತಿಂಗಳಿನಲ್ಲಿಯೇ ಅವನ ಮಗಳು ವಿಧವೆಯಾದಳು. ಈ ದುರ್ಘಟನೆಯ ದೋಷ ತನ್ನದೇ ಎಂದು ತಿಳಿದುಕೊಂಡ ಹಾಗೂ ತನ್ನ ಜ್ಞಾನವನ್ನು ಮಗಳಿಗೆ ಸಮರ್ಪಿಸುತ್ತಾ 'ಲೀಲಾವತಿ' ಹೆಸರಿನ ಗ್ರಂಥ ಬರೆದು ಅವಳ ಹೆಸರನ್ನು ಭಾರತೀಯ ಇತಿಹಾಸದಲ್ಲಿ ಆಮರಳನ್ನಾಗಿ ಮಾಡಿದನು, ಶಿರೋಮಣಿ ಗ್ರಂಥವು ನಾಲ್ಕು ಖಂಡಗಳಲ್ಲಿದೆ, ಲೀಲಾವತಿ, ಬೀಜಗಣಿತ, ಗಣಿತಧ್ಯಾಯ, ಹಾಗೂ ಗೋಲಾಧ್ಯಾಯವೆಂದು ಅವನ್ನು ಕರೆಯಲಾಗಿದೆ.
“ಲೀಲಾವತಿ' ಮುಖ್ಯಶಃ ಅಂಕಗಣಿತಕ್ಕೆ ಸಂಬಂಧಪಟ್ಟಿದ್ದಾಗಿದೆ. ಹಾಗೂ ಇದರ ಚತುಷ್ಪಾದ ಶ್ಲೋಕಗಳಲ್ಲಿ ಕೂಡಿಸುವದು, ಗುಣಿಸುವದು, ಭಾಗಿಸುವದು, ವರ್ಗ, ಧನವರ್ಗ, ವರ್ಗಮೂಲ, ಘನಮೂಲ, ಮುಂತಾದವುಗಳ ವರ್ಣನೆಗಳಿವೆ.
ಗೋಲಾಧ್ಯಾಯವು, ಗೋಲಾರ್ಧಕ್ಕೆ ಸಂಬಂಧಪಟ್ಟಿದೆ. ಗಣಿತಾಧ್ಯಾಯದ ಸಂಬಂಧವು ಗ್ರಹಗಳು, ನಕ್ಷತ್ರಗಳಿಗೆ ಗಣಿತಕ್ಕೆ ಸಂಬಂಧಿಸಿದೆ,
ಭಾಸ್ಕರನು ಶೂನ್ಯವನ್ನು ಬಳಸಿ, ತಿಳಿಸಿದರು. ಅದರನುಸಾರ ಶೂನ್ಯವನ್ನು ಹೆಚ್ಚಿಸುವದು, ಕಡಿಮೆ ಮಾಡುವದರಿಂದ ಆ ಯಾವ ಅಂಕೆಯ ಮೇಲೂ ಪರಿಣಯವಾಗದು. ಯಾವುದೇ ಸಂಖ್ಯೆಯಲ್ಲಿ ಅನಂತದ ಯೋಗ ಅನಂತವೇ ಆಗುತ್ತದೆ. ಭಾಸ್ಕರನ ಬೀಜಗಣಿತದಲ್ಲಿ ಮಹತ್ವಪೂರ್ಣ ಕೊಡುಗೆಯೆಂದರೆ ಚಕ್ರವಾಲದವಿಧಿ, ಇದರಿಂದ ಅವರು ಬೀಜಗಣಿತದ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು. ನಂತರ ಅದರ ಶೋಧ ಯುರೋಪದ ವೈಜ್ಞಾನಿಕರ ಮುಖಾಂತರವಾಯಿತು. ಅದಕ್ಕೆ'"ಇನವರ್ಸಸಾಯಿಕ'ಯಂದು ಹೆಸರು ಕೊಟ್ಟರು.
ಒಬ್ಬ ಗಣಿತಜ್ಞನಲ್ಲದೇ ಭಾಸ್ಕರನು ಒಬ್ಬ ಖಗೋಲ ವಿದ್ಯಾವಂತನೂ ಆಗಿದ್ದನು. ಅವನು ತಾತ್ಕಾಲಿಕ ಗತಿಯ ಕಾರಣ ಖಗೋಲ ವಿಜ್ಞಾನಿಗಳಿಗೆ ಗ್ರಹಗಳ ಗತಿ ಯನ್ನು ಕಂಡುಹಿಡಿಯಲು ಸಹಾಯಕವಾಯಿತು. ಭಾಸ್ಕರನು ಒಂದು ಅಣು ಪುಸ್ತಕ ಕರಣ ಕುತೂಹಲ ಬರದನು. ಇದರಿಂದ ಪಂಚಾಂಗಗಳನ್ನು ಸಿದ್ಧಪಡಿಸಲು ಸಹಾಯಕವಾಗುತ್ತದೆ.
ನ್ಯೂಟನ್‌ನ ಮುಖಾಂತರ ಗುರುತ್ವಾಕರ್ಷಣ ಸಿದ್ಧಾಂತ ಪ್ರತಿಪಾದಿಸಿದ ಅನೇಕ ವರ್ಷಗಳ ಮೊದಲೇ ಬರೆದ ಭಾಸ್ಕರನ ಶ್ಲೋಕಗಳಲ್ಲಿ ಈ ಮಾತಿನ ಸಂಕೇತವಾಗಿ ಭೂಮಿಯಲ್ಲಿ ಆಕರ್ಷಣ ಶಕ್ತಿ ಇದೆ. ಆದಕಾರಣ ಇದು ಪದಾರ್ಥವನ್ನು ತನ್ನತ ಎಳೆದುಕೊಳ್ಳುವದು, ರಾಯಲ್ ಸೊಸೈಟಿಯ ಜರ್ನಲ್‌ದಲ್ಲಿ (ಪತ್ರಿಕೆ) ಡಾ. ಸ್ಫೋಟ ವುಡ್‌ನು- ಭಾಸ್ಕರನ ವಿವೇಚನಾ ಸೂಕ್ಷ್ಮತೆಗಳು ಉಚ್ಚಕೋಟಿಯವು. ಅಂತೆಯೇ ಭಾಸ್ಕರ ನಿಂದ ಪ್ರತಿಪಾದಿತ ಗಣಿತ ಜೋತಿಷ್ಯದ ಸಿದ್ಧಾಂತಗಳ ತುಲನೆ ಇಂದಿನ ಗಣಿತ ಜೋತಿಷ್ಟ ಕಾರರೊಂದಿಗೆ ಮಾಡಲಾಗದು ಎಂದಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ